ನನಗೆ ಟಿಕೆಟ್‌ ಖಾತ್ರಿ: ಈಶ್ವರಪ್ಪ

ಮಂಗಳವಾರ, ಮಾರ್ಚ್ 26, 2019
31 °C

ನನಗೆ ಟಿಕೆಟ್‌ ಖಾತ್ರಿ: ಈಶ್ವರಪ್ಪ

Published:
Updated:
ನನಗೆ ಟಿಕೆಟ್‌ ಖಾತ್ರಿ: ಈಶ್ವರಪ್ಪ

ಕೋಲಾರ: ‘ಪಕ್ಷದಲ್ಲಿ ನನಗೆ ಟಿಕೆಟ್‌ ಸಿಗುವುದು ಖಾತ್ರಿಯಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ರಾಯಣ್ಣ ಬಿಗ್ರೇಡ್‌ ಸಂಘಟನೆಯ ಕಾರ್ಯ ಚಟುವಟಿಕೆಗಳಿಗೆ ಹೋಗುವುದಿಲ್ಲ’ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಟಿಕೆಟ್‌ ವಿಚಾರವಾಗಿ ಉದ್ಭವಿಸಿದ್ದ ಗೊಂದಲಗಳೆಲ್ಲಾ ಪರಿಹಾರವಾಗಿವೆ. ರಾಜ್ಯದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ನಾಯಕರೆಲ್ಲಾ ಒಗ್ಗಟ್ಟಾಗಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ, ಅವರೆಲ್ಲಾ ಒಬ್ಬರನ್ನೊಬ್ಬರು ಸೋಲಿಸಲು ಈಗಿನಿಂದಲೇ ಒಳ ಸಂಚು ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಈ ಬಾರಿಯೂ ಪರಮೇಶ್ವರ್ ಸೋಲಿಗೆ ಕಾರಣರಾಗುತ್ತಾರೆ. ಕಾಂಗ್ರೆಸ್‌ ಒಳ ಜಗಳದಿಂದ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವುದು ಖಚಿತ ಎಂದರು.

ಪ್ರಮಾಣ ಮಾಡಲಿ: ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ ಸೋಲಿಗೆ ಸಂಚು ಮಾಡಲಿಲ್ಲವೆಂದು ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ದೇವಿ ಮೇಲೆ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.

ಕೆಲ ಲೋಪಗಳಿಂದ ಪರಮೇಶ್ವರ್‌ ಸೋಲುವಂತಾಯಿತು ಎಂದು ಕಾಂಗ್ರೆಸ್‌ ಶಾಸಕ ಕೆ.ಎನ್.ರಾಜಣ್ಣ ಅವರೇ ಒಪ್ಪಿಕೊಂಡಿದ್ದಾರೆ. ರಾಜಣ್ಣ ಪರೋಕ್ಷವಾಗಿ ಸಿದ್ದರಾಮಯ್ಯ ಅವರನ್ನೇ ಗುರಿಯಾಗಿಸಿಕೊಂಡು ಈ ಹೇಳಿಕೆ ನೀಡಿದ್ದಾರೆ. ಪರಮೇಶ್ವರ್‌ ಸೋಲಿಗೆ ಸಿದ್ದರಾಮಯ್ಯರೇ ಕಾರಣ ಎಂಬುದಕ್ಕೆ ಇದಕ್ಕಿಂತೆ ಬೇರೆ ಸಾಕ್ಷ್ಯ ಬೇಕಿಲ್ಲ ಎಂದರು.

ದೊಡ್ಡ ಕಳಂಕ: ಪೊಲೀಸ್‌ ಇಲಾಖೆ ಕಾರ್ಯ ಚಟುವಟಿಕೆಗಳಲ್ಲಿ ರಾಜಕೀಯ ನಾಯಕರ ಹಸ್ತಕ್ಷೇಪ ಕುರಿತು ಐಪಿಎಸ್‌ ಅಧಿಕಾರಿಯೊಬ್ಬರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವುದು ರಾಜ್ಯದ ಇತಿಹಾಸದಲ್ಲಿ ದೊಡ್ಡ ಕಳಂಕ. ಸರ್ಕಾರಕ್ಕೆ ಇದಕ್ಕಿಂತ ಅವಮಾನ ಬೇಕಿಲ್ಲ. ಸಿದ್ದರಾಮಯ್ಯ ಅವರು ಈ ಬಗ್ಗೆ ತನಿಖೆಗೆ ಆದೇಶಿಸಿರುವುದು ಅವರ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ ಎಂದು ಟೀಕಿಸಿದರು.

ಲೋಕಾಯುಕ್ತರ ಕೊಲೆ ಯತ್ನ, ಐಪಿಎಸ್ ಅಧಿಕಾರಿಗಳ ಪತ್ರ, ಶಾಸಕರ ಮಗನ ಪುಂಡಾಟ ಇವೆಲ್ಲಾ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಉದಾಹರಣೆಗಳು. ಅಧಿಕಾರಿಗಳು ಸರ್ಕಾರದ ಹಿಡಿತದಲ್ಲಿ ಇಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದು ವ್ಯಂಗ್ಯವಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry