ದೇವಾಲಯ ಪ್ರವೇಶಕ್ಕೆ ನಿರಾಕರಣೆ; ದೂರು

7

ದೇವಾಲಯ ಪ್ರವೇಶಕ್ಕೆ ನಿರಾಕರಣೆ; ದೂರು

Published:
Updated:

ಕುಣಿಗಲ್: ತಾಲ್ಲೂಕಿನ ಆರ್.ಬ್ಯಾಡರಹಳ್ಳಿ ಸಮೀಪದ ಮುದ್ದಹನುಮನಪಾಳ್ಯ ಗ್ರಾಮದ ಗ್ರಾಮದೇವತೆ ಮಾರಮ್ಮ ಜಾತ್ರೆ ಮಂಗಳವಾರ ನಡೆಯಲಿದೆ. ದೇವಾಲಯ ಪ್ರವೇಶಕ್ಕೆ ಸವರ್ಣೀಯರು ನಿರಾಕರಿಸುತ್ತಿದ್ದು, ವಿವಾದ ಬಗೆಹರಿಸಬೇಕು ಎಂದು ಗ್ರಾಮದ ದಲಿತ ಮುಖಂಡರು ತಹಶೀಲ್ದಾರ್ ನಾಗರಾಜು, ಸಿಪಿಐ ಅಶೋಕ್‌ಕುಮಾರ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಕಳೆದ 5 ವರ್ಷಗಳಿಂದ ದಲಿತರು ಮತ್ತು ಸವರ್ಣೀಯರು ಒಟ್ಟಿಗೆ ಹಬ್ಬ ಆಚರಣೆ ಮಾಡುವ ಬಗ್ಗೆ ಚರ್ಚಿಸಲಾಗಿತ್ತು. ಆದರೆ, ಈಗ ಆ ಉದ್ದೇಶಕ್ಕೆ ಅವಕಾಶವಿಲ್ಲವಾಗಿದೆ. ದೇವಾಲಯ ಪ್ರವೇಶಕ್ಕೆ ನಿರಾಕರಿಸಿ ಕೆಲವರು ಬೆದರಿಕೆ ಹಾಕುತ್ತಿದ್ದಾರೆ ಎಂದು ದಲಿತ ಮುಖಂಡರಾದ ರಾಮಕೃಷ್ಣ, ಶ್ರೀನಿವಾಸ್, ಸುರೇಶ್ ಮತ್ತು ಮಹೇಶ್ ಅವರು ಅಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.

ಭರವಸೆ: ಗ್ರಾಮಕ್ಕೆ ಭೇಟಿ ಎರಡು ಗುಂಪುಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ತಹಶೀಲ್ದಾರ್ ಮತ್ತು ಸಿಪಿಐ ಮುಖಂಡರಿಗೆ ಭರವಸೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry