ಕಾಂಗ್ರೆಸ್‌ನ ಪಾಪದ ಕೊಡ ತುಂಬಿದೆ: ಅನಂತಕುಮಾರ ಹೆಗಡೆ

7

ಕಾಂಗ್ರೆಸ್‌ನ ಪಾಪದ ಕೊಡ ತುಂಬಿದೆ: ಅನಂತಕುಮಾರ ಹೆಗಡೆ

Published:
Updated:
ಕಾಂಗ್ರೆಸ್‌ನ ಪಾಪದ ಕೊಡ ತುಂಬಿದೆ: ಅನಂತಕುಮಾರ ಹೆಗಡೆ

ಎಂ.ಕೆ.ಹುಬ್ಬಳ್ಳಿ: ‘ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವರ ಪಾಪದ ಕೊಡ ತುಂಬಿದೆ. ಮಣ್ಣಿನ ಮೇಲೆ ನಿರಂತರ ಶೋಷಣೆ ಮಾಡಿದ ಕಾಂಗ್ರೆಸ್ ಮನೆಗೆ ಹೋಗುವ ಕಾಲ ಈಗ ಸನ್ನಿಹಿತವಾಗಿದೆ’ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು.

ಸಮೀಪದ ದಾಸ್ತಿಕೊಪ್ಪ ಗ್ರಾಮದಲ್ಲಿ ನಡೆದ ಕಿತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವಶಕ್ತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಕಾಂಗ್ರೆಸ್‌ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಸಿದ್ಧರಾಮಯ್ಯ ಸರ್ಕಾರದ ಅವಧಿಯಲ್ಲಿ 7,500 ಜನರ ಕೊಲೆಗಳಾಗಿವೆ. 9,500 ಕ್ಕೂ ಹೆಚ್ಚು ಅತ್ಯಾಚಾರ ನಡೆದಿವೆ. 35 ಸಾವಿರಕ್ಕೂ ಅಧಿಕ ಅಮಾಯಕ ಜನ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾಂಗ್ರೆಸ್‌ನವರು ಮಾತನಾಡುವುದೇ ಇಲ್ಲ’ ಎಂದರು.

‘ಸಿದ್ಧರಾಮಯ್ಯ ಸರ್ಕಾರ ಮಠ ಮಂದಿರ ವಶಪಡಿಸಿಕೊಳ್ಳುವ ಹುನ್ನಾರ ನಡೆಸಿದೆ. ಆದರೆ ಮಠ ಮಂದಿರ ವಶಪಡಿಸಿಕೊಳ್ಳಲು ನೋಟಿಸ್ ಜಾರಿ ಮಾಡಲಿ’ ಎಂದು ಸವಾಲು ಹಾಕಿದರು.

‘ರಾಹುಲ್‌ ಗಾಂಧಿ ಎಲ್ಲೆಲ್ಲಿ ಕಾಲಿಟ್ಟಿದ್ದಾರೋ ಅಲ್ಲೆಲ್ಲ ಬಿಜೆಪಿ ಗೆಲ್ಲುತ್ತದೆ. ಅವರ ನಾಟಕ ಇಲ್ಲಿ ನಡೆಯದು’ ಎಂದರು. ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ‘ಬಿಜೆಪಿ ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದರು.

ಮುಖಂಡರಾದ ಧನಂಜಯ ಜಾಧವ, ಮಹೇಶ ಜಾಧವ, ಮಾಜಿ ಶಾಸಕ ಸುರೇಶ ಮಾರಿಹಾಳ, ಸಿ.ಆರ್.ಪಾಟೀಲ, ಬಸನಗೌಡ ಸಿದ್ರಾಮನಿ, ಆನಂದ ಜಕಾತಿ, ಮಹಾಂತೇಶ ದೊಡಗೌಡ್ರ, ಸಿದ್ಧಯ್ಯ ಹಿರೇಮಠ, ಚನ್ನಬಸಪ್ಪ ಮೊಕಾಶಿ, ಮಂಜುನಾಥ ದೇವರೆಡ್ಡಿ ಇದ್ದರು. ಶಿವಾನಂದ ಹನುಮಸಾಗರ ನಿರೂಪಿಸಿದರು. ಮಹಾಂತೇಶ ಚನ್ನಪ್ಪಗೌಡ್ರ ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry