ಮಕ್ಕಳ ಪ್ರತಿಭೆ ಅನಾವರಣಕ್ಕೆ ಶಿಕ್ಷಕರು ಶ್ರಮಿಸಲಿ

7

ಮಕ್ಕಳ ಪ್ರತಿಭೆ ಅನಾವರಣಕ್ಕೆ ಶಿಕ್ಷಕರು ಶ್ರಮಿಸಲಿ

Published:
Updated:

ಹೊರ್ತಿ: ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ, ಪಾಲಕ ಜೊತೆ ಶಾಲೆ ಪಾತ್ರ ಮಹತ್ತರವಾಗಿದೆ ಎಂದು ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಅನಿಲ ಬಮಗೊಂಡ ಹೇಳಿದರು.

ಗ್ರಾಮದ ಮಲ್ಲಿಕಾರ್ಜುನ ಅಂತರರಾಷ್ಟ್ರೀಯ ಪಬ್ಲಿಕ್‌ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಮಗುವಿನಲ್ಲೂ ಬುದ್ದಿ, ಕೌಶಲ, ಕಲಿಕಾ ಹಂಬಲ, ಶಕ್ತಿ ಇರುತ್ತದೆ. ಅದನ್ನು ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸುವುದು ಅತ್ಯವಶ್ಯವಾಗಿದೆ ಎಂದರು.

ಸಂಸ್ಥೆಯ ಅಧ್ಯಕ್ಷೆ ಮಹಾದೇವಿ ಗಡ್ಡದ ಮಾತನಾಡಿ, ಶಾಲೆಯಲ್ಲಿ ಮಕ್ಕಳಿಗೆ ಪರಸರ ಪ್ರಜ್ಞೆ ತಿಳಿವಳಿಕೆಗಾಗಿ ಗಿಡ ಮರಗಳನ್ನೂ ನೆಟ್ಟು ಪರಿಸರ ಪ್ರಜ್ಞೆ, ದೈಹಿಕ ಮಾನಸಿಕ ಬೆಳವಣಿಗೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆ, ಯೋಗಾಭ್ಯಾಸ, ಪರಿಸರ ಸ್ವಚ್ಚತೆ, ಉತ್ತಮ ಸಂಸ್ಕಾರ, ಸಂಸ್ಕೃತಿ ಬಗ್ಗೆ ತಿಳಿವಳಿಕೆ ನೀಡಬೇಕು ಎಂದು ಹೇಳಿದರು.

ರಾಮ ಸುಕ್ತೆ, ಅನಿತಾ ಭೋಸಗಿ ಮಾತನಾಡಿದರು. ಪ್ರಾಚಾರ್ಯ ಸುನೀಲ ಜುಮನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಜಿ.ಗಡ್ಡದ, ಬಿ.ಬಿ.ಗಡ್ಡದ ಸೇರಿದಂತೆ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಹರೀಶ ಶಿರಶ್ಯಾಡ ಸ್ವಾಗತಿಸಿದರು. ಶ್ರೀಕರ ಹಿರೇಮಠ, ಆರ್.ಜಿ.ಚವ್ಹಾಣ ನಿರೂಪಿಸಿದರು. ಶಾಹಿನ್ ಬಿರಾದಾರ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry