ರೈತರ ಉಪವಾಸ ಸತ್ಯಾಗ್ರಹ ಅಂತ್ಯ

ಮಂಗಳವಾರ, ಮಾರ್ಚ್ 19, 2019
33 °C

ರೈತರ ಉಪವಾಸ ಸತ್ಯಾಗ್ರಹ ಅಂತ್ಯ

Published:
Updated:
ರೈತರ ಉಪವಾಸ ಸತ್ಯಾಗ್ರಹ ಅಂತ್ಯ

ಕೊಲ್ಹಾರ: ಸಿದ್ದೇಶ್ವರ ಶುಗರ್ಸ್ ಹೆಸರಿನ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಬಸವನ ಬಾಗೇವಾಡಿ ತಾಲ್ಲೂಕಿನ ಅಂಗಡಗೇರಿ ಹಾಗೂ ತೆಲಗಿ ಗ್ರಾಮದ ರೈತರಿಂದ 2008 ರಲ್ಲಿ ಕೆಐಡಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದ ಜಮೀನಿಗಳಿಗೆ ಸೂಕ್ತ ಪರಿಹಾರ ನೀಡಿಲ್ಲ ಎಂದು ಆರೋಪಿಸಿ ಸಂತ್ರಸ್ತ ರೈತರು ಕೊಲ್ಹಾರ ತಹಶೀಲ್ದಾರ್‌ ಕಾರ್ಯಾಲಯದ ಮುಂದೆ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹ ಕೆಐಡಿಬಿ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಮಂಗಳವಾರ ಅಂತ್ಯಗೊಂಡಿತು.

ಕೆಐಎಡಿಬಿ ಅಧಿಕಾರಿಗಳಾದ ಪ್ರಹ್ಲಾದ ಕಮ್ಮಾರ ಹಾಗೂ ಶಂಕರ ತಳವಾರ ಧರಣಿ ನಿರತ ಸ್ಥಳಕ್ಕೆ ಬಂದು ಸಂತ್ರಸ್ತ ರೈತರ ಸಮಸ್ಯೆಯನ್ನು ಆಲಿಸಿದರು. ಕೂಡಲೇ ಈ ಬಗ್ಗೆ ಕ್ರಮ ಕೈಗೊಂಡು ರೈತರಿಗೆ ಸಿಗಬೇಕಾದ ಸೂಕ್ತ ಬೆಲೆಯನ್ನು ನೀಡಲಾಗುವುದು ಧರಣಿ ಹಿಂಪಡೆದುಕೊಳ್ಳಿ ಎಂಬ ಮಾತಿಗೆ ಲಿಖಿತವಾಗಿ ಬರೆದುಕೊಡುವವರೆಗೆ ಧರಣಿ ಹಿಂಪಡೆಯಲಾರೆವು ಎಂದು ರೈತರು ಹಠ ಹಿಡಿದರು. ನಂತರ ಕೆಐಡಿಬಿ ಅಧಿಕಾರಿಗಳು ತಮ್ಮ ಮೇಲಾಧಿಕಾರಿಗಳೊಂದಿಗೆ ಫೋನ್ ಮೂಲಕ ಚರ್ಚಿಸಿ ಎರಡು ದಿನಗಳೊಳಗಾಗಿ ಸೂಕ್ತ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದ ನಂತರ ಧರಣಿಯನ್ನು ಅಂತ್ಯಗೊಳಿಸಿದರು. ತಹಶೀಲ್ದಾರ್‌ ಎಂ.ಬಿ ನಾಗಠಾಣ ಇದ್ದರು.

ಬಾಧಿತ ಅಂಗಡಗೇರಿ ಹಾಗೂ ತೆಲಗಿ ಗ್ರಾಮದ ರೈತದಾದ ವಿಶ್ವನಾಥ ಬಿದರಿ, ಶಂಕರಗೌಡ ಅಂಗಡಗೇರಿ, ಅಶೋಕ ಅಮೀನಪ್ಪಗೋಳ, ನಾಗಪ್ಪ ಅಮೀನಪ್ಪಗೋಳ, ವಿರೇಶ ಹಂಡಗಿ, ದಲಿತ ಮುಖಂಡ ಅಶೋಕ ನಂದಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಕಲ್ಲಪ್ಪ ಸೊನ್ನದ, ಬನಪ್ಪ ಬಾಲಗೊಂಡ, ವಿಕ್ರಂ ಭಾರಸ್ಕಳ್, ಕೋಲಕಾರ, ಡೊಂಗ್ರಿ ಕಟಬರ್, ಮಹೇಶ ತುಂಬರಮಟ್ಟಿ, ಗಿರೀಶ ಮಠಪತಿ, ಅಶೋಕ ಮುಧಕವಿ, ಮಂಜುನಾಥ ತುಂಬರಮಟ್ಟಿ, ಬಮ್ಮಣ್ಣ ಸೊನ್ನದ, ರಾಜು ವಡ್ಡರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry