ಪಕ್ಷದ ಹುದ್ದೆಯಿಂದ ವಜಾ: ಹರೀಶ್‌

7
ಪ್ರತಿಭಾ ಜತೆ ಅನುಚಿತವಾಗಿ ವರ್ತಿಸಿದ ಅಬ್ದುಲ್‌ ಸತ್ತಾರ್‌

ಪಕ್ಷದ ಹುದ್ದೆಯಿಂದ ವಜಾ: ಹರೀಶ್‌

Published:
Updated:

ಮಂಗಳೂರು: ಪಾಲಿಕೆ ಸದಸ್ಯೆ ಪ್ರತಿಭಾ ಕುಳಾಯಿ ಜತೆ ಅನುಚಿತವಾಗಿ ವರ್ತಿಸಿದ್ದಾರೆ ಎನ್ನುವ ಆರೋಪದ ಮೇಲೆ ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸತ್ತಾರ್ ಅವರನ್ನು ಹುದ್ದೆಯಿಂದ ವಜಾಗೊಳಿ ಸಲಾಗಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್‌ಕುಮಾರ್‌ ತಿಳಿಸಿದ್ದಾರೆ.

ಸೋಮವಾರ ಸಂಜೆ ಸುರತ್ಕಲ್‌ನಲ್ಲಿ ಅಬ್ದುಲ್‌ ಸತ್ತಾರ್‌ ಅವರು, ಪ್ರತಿಭಾ ಕುಳಾಯಿ ಅವರ ಜತೆ ಅನುಚಿತವಾಗಿ ವರ್ತಿಸಿದ್ದು, ಪ್ರತಿಭಾ ಕುಳಾಯಿ ಅವರು ಸತ್ತಾರ್‌ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನುವ ಸುದ್ದಿ ಸಾಮಾ ಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಆದರೆ, ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.

ಇದೀಗ ಪ್ರತಿಭಾ ಕುಳಾಯಿ ಅವರ ಜತೆ ಅನುಚಿತ ವರ್ತನೆ ತೋರಿದ ಸತ್ತಾರ್‌ ಅವರನ್ನು ಹುದ್ದೆಯಿಂದ ವಜಾ ಮಾಡಲಾಗಿದೆ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry