ಜಿಲ್ಲೆಯಲ್ಲಿ ತುಂತುರು ಮಳೆ

ಮಂಗಳವಾರ, ಮಾರ್ಚ್ 26, 2019
31 °C

ಜಿಲ್ಲೆಯಲ್ಲಿ ತುಂತುರು ಮಳೆ

Published:
Updated:
ಜಿಲ್ಲೆಯಲ್ಲಿ ತುಂತುರು ಮಳೆ

ಚಾಮರಾಜನಗರ: ಜಿಲ್ಲೆಯ ವಿವಿಧೆಡೆ ಮಂಗಳವಾರ ಸಂಜೆ ಕೆಲ ಸಮಯ ತುಂತುರು ಮಳೆಯಾಗಿದೆ.

ಬೆಳಿಗ್ಗೆಯಿಂದ ಬಿಸಿಲಿನ ವಾತಾವರಣವಿದ್ದ ನಗರದಲ್ಲಿ ಮಧ್ಯಾಹ್ನದ ಬಳಿಕ ಮೋಡ ಆವರಿಸಿಕೊಂಡಿತ್ತು. ಸಂಜೆ ವೇಳೆ ಸಣ್ಣನೆ ಮಳೆ ಜಿನುಗಲು ಆರಂಭಿಸಿತು. ಸುಮಾರು 10 ನಿಮಿಷ ಹನಿಗಳ ಸಿಂಚನವಾಯಿತು.

ಕೊಳ್ಳೇಗಾಲ ಹಾಗೂ ಯಳಂದೂರು ತಾಲ್ಲೂಕಿನಲ್ಲೂ ತುಂತುರು ಮಳೆ ಸುರಿಯಿತು.

ವಿಪರೀತ ಬಿಸಿಲಿನ ಧಗೆ, ದೂಳಿನಿಂದ ಕಂಗೆಟ್ಟಿದ್ದ ಜನರಿಗೆ ಮಳೆ ತುಸು ತಂಪು ನೀಡಿತು. ನಗರದ ಬಹುತೇಕ ರಸ್ತೆಗಳನ್ನು ಅಗೆದಿರುವುದರಿಂದ ಕೆಸರು ಉಂಟಾಗಿ ಪಾದಚಾರಿಗಳು ಮತ್ತು ವಾಹನ ಸವಾರರು ಓಡಾಡಲು ಪರದಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry