ಚಳಿಗಾಲದ ಪ್ಯಾರಾಲಿಂಪಿಕ್ಸ್‌; ಕಜಕಸ್ತಾನಕ್ಕೆ ಮೊದಲ ಚಿನ್ನ

7

ಚಳಿಗಾಲದ ಪ್ಯಾರಾಲಿಂಪಿಕ್ಸ್‌; ಕಜಕಸ್ತಾನಕ್ಕೆ ಮೊದಲ ಚಿನ್ನ

Published:
Updated:
ಚಳಿಗಾಲದ ಪ್ಯಾರಾಲಿಂಪಿಕ್ಸ್‌; ಕಜಕಸ್ತಾನಕ್ಕೆ ಮೊದಲ ಚಿನ್ನ

ಪೆಯಾಂಗ್ ಚಾಂಗ್‌, ದಕ್ಷಿಣ ಕೊರಿಯಾ (ಎಎಫ್‌ಪಿ): ಚಳಿಗಾಲದಪ್ಯಾರಾಲಿಂಪಿಕ್ಸ್‌ನಲ್ಲಿ ಬುಧವಾರ ಚಿನ್ನದ ಪದಕ ಗೆದ್ದ ಅಮೆರಿಕದ ಒಕಸಾನ ಮಾಸ್ಟರ್ಸ್‌ ಅವರ ಸಂಭ್ರಮ ಮುಗಿಲುಮುಟ್ಟಿತ್ತು.

ಮಹಿಳೆಯರ 1.1ಕಿ.ಮೀ ಕ್ರಾಸ್‌ ಕಂಟ್ರಿ ಸ್ಕೀಯಿಂಗ್ ವಿಭಾಗದಲ್ಲಿ ಚಿನ್ನ ಗೆದ್ದ ಒಕಸಾನ ಅವರದ್ದು ಹೋರಾಟದ ಬದುಕು. ಅಂಗವೈಕಲ್ಯಕ್ಕೆ ಸೆಡ್ಡು ಹೊಡೆದು ಬೆಳೆದು ನಿಂತ ಒಕಸಾನ ಜೀವನಪ್ರೀತಿಗೆ ಲಭಿಸಿದ ಜಯ ಇದು.

ಹೌದು; 1986ರಲ್ಲಿ ಚರ್ನೊಬಿಲ್ ಪರಮಾಣು ದುರಂತ ನಡೆದಿತ್ತು. ನಂತರದ ಹತ್ತಾರು ವರ್ಷಗಳವರೆಗೂ ಸುತ್ತಲಿನ ವಾತಾವರಣದಲ್ಲಿ ಪರ ಮಾಣುವಿನ ವಿಷವಿತ್ತು. ಅಂತಹ ವಾತಾವರಣದಲ್ಲಿ ಜನಿಸಿದ್ದವರು ಒಕಸಾನ. 1989ರಲ್ಲಿ ಹುಟ್ಟಿದ ಒಕಸಾನಗೆ ಅಂಗೈವೈಕಲ್ಯ ಕಾಡಿತ್ತು. ಅವರ ಎರಡೂ ಕಾಲುಗಳಲ್ಲಿ ಆರು ಬೆರಳುಗಳು ಇದ್ದವು. ಅವರ ಎರಡೂ ಕೈಗಳಲ್ಲಿ ಹೆಬ್ಬೆರಳು ಇರಲಿಲ್ಲ. ಎಡಗಾಲು (15ಸೆಂ.ಮೀ) ಬಲಗಾಲಿಗಿಂತ ಚಿಕ್ಕದಾಗಿತ್ತು.

ಅಂಗವಿಕಲ ಹೆಣ್ಣುಮಗುವನ್ನು ಕುಟುಂಬದವರು ದೂರ ಮಾಡಿದರು. ಒಕಸಾನ ಅನಾಥಾಶ್ರಮದಲ್ಲಿ ಬೆಳೆದರು. ಏಳು ವರ್ಷದ ಬಾಲಕಿಯನ್ನು ಅಮೆರಿಕದ ಯುವತಿಯೊಬ್ಬರು ದತ್ತು ಪಡೆದರು.  ಅಮೆರಿಕಕ್ಕೆ ಬಂದ ಮೇಲೆ ಅವರಿಗೆ ಅನಾರೋಗ್ಯ ಕಾಡಿತು. ಅನಿವಾರ್ಯವಾಗಿ ವೈದ್ಯರು ಅವರ ಎರಡೂ ಕಾಲುಗಳನ್ನು ಕತ್ತರಿಸಿದರು. ಕೈಗಳಿಗೆ ಶಸ್ತ್ರಚಿಕಿತ್ಸೆ ಮಾಡಿದರು. ಈ ಎಲ್ಲ ಸವಾಲುಗಳನ್ನು ಮೀರಿ ಕ್ರೀಡೆಯಲ್ಲಿ ಮಿಂಚಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry