ಕನ್ನಡದಲ್ಲೇ ಸೇವೆ ಒದಗಿಸಿ: ಟ್ವಿಟರ್ ಅಭಿಯಾನಕ್ಕೆ ವ್ಯಾಪಕ ಬೆಂಬಲ

7

ಕನ್ನಡದಲ್ಲೇ ಸೇವೆ ಒದಗಿಸಿ: ಟ್ವಿಟರ್ ಅಭಿಯಾನಕ್ಕೆ ವ್ಯಾಪಕ ಬೆಂಬಲ

Published:
Updated:

ಬೆಂಗಳೂರು: ಭಾರತೀಯ ಗ್ರಾಹಕರಿಗೆ ತಮ್ಮದೇ ಭಾಷೆಯಲ್ಲಿ ಗ್ರಾಹಕ ಸೇವೆಗಳು ಸಿಗುವಂತೆ ಮಾಡಬೇಕೆಂಬ ಉದ್ದೇಶದಿಂದ ಕನ್ನಡ ಗ್ರಾಹಕರ ಕೂಟ ಹಮ್ಮಿಕೊಂಡಿರುವ #ServeInMyLanguage ಟ್ವಿಟರ್ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.

ವಿಶ್ವ ಗ್ರಾಹಕರ ಹಕ್ಕುಗಳ ದಿನವಾದ ಇಂದು (ಮಾರ್ಚ್ 15) ಬೆಳಿಗ್ಗೆ 10 ಗಂಟೆಯಿಂದ ಅಭಿಯಾನ ಆರಂಭವಾಗಿದೆ. #WorldConsumerRightsDay #ServeInMyLanguage ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಆರಂಭಗೊಂಡಿರುವ ಅಭಿಯಾನ ಬೆಂಬಲಿಸಿ ನೂರಾರು ಜನ ಟ್ವೀಟ್ ಮಾಡಿದ್ದಾರೆ.

ಕನ್ನಡಿಗರಿಗೆ ಕನ್ನಡದಲ್ಲೇ ಗ್ರಾಹಕ ಸೇವೆಗಳು ದೊರೆಯುವಂತಾಗಬೇಕು ಎಂದು ನೂರಾರು ಮಂದಿ ಟ್ವೀಟ್ ಮಾಡಿದ್ದರೆ, ಫೇಸ್‌ಬುಕ್‌ನಲ್ಲೂ ಅನೇಕ ಸಂದೇಶಗಳು ಹರಿದಾಡುತ್ತಿವೆ.

‘ಕನ್ನಡಿಗರಿಗೆ ಎಲ್ಲ ಸೇವೆ, ಸವಲತ್ತುಗಳೂ ಕನ್ನಡದಲ್ಲೇ ದೊರೆಯುವಂತಾಗಬೇಕು’ ಎಂದು ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದಾರೆ.

ಅಡುಗೆ ಅನಿಲ ಸಿಲಿಂಡರ್‌ಗಳ ಅಪಘಾತದಿಂದಾಗಿ ಅನೇಕ ಮಂದಿ ಪ್ರತಿ ವರ್ಷ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಿಲಿಂಡರ್‌ಗಳಲ್ಲಿ ಸುರಕ್ಷತಾ ಮುನ್ನೆಚ್ಚರಿಕೆಗಳನ್ನೂ ಕನ್ನಡದಲ್ಲೇ ಮುದ್ರಿಸಬೇಕು ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

‘ಪ್ರತಿ ರಾಜ್ಯದಲ್ಲೂ ಅಲ್ಲಿನ ಸ್ಥಳೀಯ ಭಾಷೆಯಲ್ಲೇ ಗ್ರಾಹಕ ಸೇವೆ ಒದಗಿಸುವಂತೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ವಿಶ್ವ ಗ್ರಾಹಕರ ಹಕ್ಕುಗಳ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡುತ್ತಿದ್ದೇನೆ. ಪ್ರತಿಯೊಬ್ಬ ವ್ಯಕ್ತಿಗೂ ಆತನ ಭಾಷೆಯಲ್ಲಿಯೇ ಸೇವೆ ದೊರೆಯುವುದರ ಜತೆಗೆ ‘ಸಬ್‌ಕಾ ಸಾಥ್ ಸಬ್‌ ಕಾ ವಿಕಾಸ್‌’ ಗುರಿಯನ್ನು ನಾವು ತಲುಪೋಣ’ ಎಂದು ಶಾಸಕ ಸಿ.ಟಿ. ರವಿ ಟ್ವೀಟ್ ಮಾಡಿದ್ದಾರೆ.

ಕರ್ನಾಟಕದಲ್ಲಿ ಮಾರಾಟ ಮಾಡುವ ಮೊಟೊರೊಲಾ ಮೊಬೈಲ್‌ಫೋನ್‌ಗಳ ಬಳಕೆದಾರರ ಕೈಪಿಡಿಯನ್ನೂ ಕನ್ನಡದಲ್ಲೇ ನೀಡಬೇಕು ಎಂಬ ಆಗ್ರಹವೂ ಟ್ವಿಟರ್‌ನಲ್ಲಿ ವ್ಯಕ್ತವಾಗಿದೆ.

ಕರ್ನಾಟಕದಲ್ಲಿ ಮಾರಾಟವಾಗುವ ಟೂತ್‌ಪೇಸ್ಟ್‌ನಲ್ಲಿ ಇಂಗ್ಲಿಷ್, ಹಿಂದಿಯಲ್ಲಿ ಹೆಸರು ಮುದ್ರಿಸಲಾಗಿದೆ. ಆದರೆ, ಕನ್ನಡದಲ್ಲಿ ಇಲ್ಲ ಎಂದು ಹರಿಪ್ರಸಾದ್‌ ಹೊಳ್ಳ ಎಂಬುವವರು ಟ್ವೀಟ್ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry