ತಹಶೀಲ್ದಾರ್ ವಾಹನ ಚಾಲಕ ಸಾವು

7

ತಹಶೀಲ್ದಾರ್ ವಾಹನ ಚಾಲಕ ಸಾವು

Published:
Updated:

ಪುತ್ತೂರು: ವಾರದ ಹಿಂದೆ ಸಂಭವಿಸಿದ ಕಾರು–ಲಾರಿ ಡಿಕ್ಕಿ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ, ಪುತ್ತೂರು ತಹಶೀಲ್ದಾರ್ ಕಚೇರಿಯ ವಾಹನ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾರೆ.

ಪುತ್ತೂರು ತಹಶೀಲ್ದಾರ್ ವಾಹನದ ಚಾಲಕರಾಗಿರುವ ,ಪುತ್ತೂರಿನ ಸಾಮೆ ತ್ತಡ್ಕ ನಿವಾಸಿ ದೇವದಾಸ್ ನಾಯ್ಕ (58) ಮೃತಪಟ್ಟವರು. ಇದೇ 6ರಂದು ಸಂಜೆ ಸಂಸಾರ ಸಮೇತರಾಗಿ ಪಣೋಲಿಬೈಲು ಕ್ಷೇತ್ರಕ್ಕೆ ತೆರಳಿದ್ದ ದೇವದಾಸ ನಾಯ್ಕ ಅವರು ಹಿಂತಿರುಗಿ ಮನೆಗೆ ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿತ್ತು.

ಕಾರಿನಲ್ಲಿದ್ದ ಅವರ ಪತ್ನಿ ಕಮಲ, ಪುತ್ರ ಕೌಶಿಕ್ ಮತ್ತು ಸಹೋದರಿ ಪರಮೇಶ್ವರಿ ಅವರು ಗಾಯಗೊಂಡಿದ್ದರೂ ಅವರು ಪ್ರಾಣಾ ಪಾಯದಿಂದ ಪರಾಗಿದ್ದಾರೆ. ಘಟನೆಯ ಬಗ್ಗೆ ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಹಿಂದೆ ಪುತ್ತೂರಿನಲ್ಲಿ ಉಪವಿಭಾ ಗಾಧಿಕಾರಿ ವಾಹನ ಚಾಲಕರಾಗಿ, ಮಂಗಳೂರಿನಲ್ಲಿ ಆಹಾರ ಇಲಾಖೆಯ ಸಹಾಯಕ ನಿರ್ದೇಶಕರ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry