ಯುಗಾದಿಗೆ ಮನೆ ಅಲಂಕಾರ

5

ಯುಗಾದಿಗೆ ಮನೆ ಅಲಂಕಾರ

Published:
Updated:
ಯುಗಾದಿಗೆ ಮನೆ ಅಲಂಕಾರ

* ವಸ್ತುಗಳನ್ನು ಒಪ್ಪವಾಗಿ ಜೋಡಿಸಿ: ಮನೆಯನ್ನು ಹಬ್ಬಕ್ಕೆ ಅಣಿಯಾಗಿಸಲು ಸ್ವಚ್ಛತೆಯೇ ಪ್ರಧಾನ. ಮನೆಯಲ್ಲಿ ವಸ್ತುಗಳನ್ನು ಎಲ್ಲೆಂದರಲ್ಲಿ ಹರಡಬೇಡಿ. ಕರ್ಟನ್‌, ಬೆಡ್‌ಶೀಟ್‌, ಮ್ಯಾಟ್‌ಗಳನ್ನು ಒಗೆದು ಬಳಸಿ. ಶೋಕೆಸ್‌ನಲ್ಲಿಟ್ಟಿರುವ ವಸ್ತುಗಳನ್ನು ಸರಿಯಾಗಿ ಜೋಡಿಸಿ. ಅಡುಗೆ ಮನೆಯ ಶುಚಿಯನ್ನು ಬೇಗನೇ ಮಾಡಿ.

* ಅಲಂಕಾರಕ್ಕಿರಲಿ ಪ್ರಾಧಾನ್ಯ: ಹಬ್ಬವೆಂದ ಮೇಲೆ ಮನೆಗೆ ಬರುವ ಅತಿಥಿಗಳ ಸಂಖ್ಯೆ ಹೆಚ್ಚಿರುತ್ತದೆ. ಅವರಿಗೆಲ್ಲ ನಿಮ್ಮ ಕಲಾ ಕೌಶಲ ತಿಳಿಯುವುದು ಬೇಡವೇ? ಮನೆಯಲ್ಲಿ ಆಲಂಕಾರಿಕ ವಸ್ತುಗಳನ್ನಿಟ್ಟು ಆಕರ್ಷಕಗೊಳಿಸಿ. ಹೂಕುಂಡ, ವಾಲ್‌ಹ್ಯಾಂಗಿಂಗ್‌ ಹಾಕಿ ಮನೆಯ ಮೆರುಗು ಹೆಚ್ಚಿಸಿ.

* ಮಾವಿನೆಲೆ ತೋರಣ: ಹಬ್ಬದ ಸಂದರ್ಭದಲ್ಲಿ ಹಸಿರು ತೋರಣಕ್ಕೆ ಮಹತ್ವ. ಯುಗಾದಿಗೆ ಮನೆಯ ಮುಖ್ಯ ದ್ವಾರ ಸೇರಿದಂತೆ ಎಲ್ಲೆಡೆ ಮಾವಿನ ಎಲೆಯ ತೋರಣ ಕಟ್ಟುವುದು ವಾಡಿಕೆ. ಬೇವಿನ ಎಲೆಯ ಬಳಕೆಯೂ ಇದೆ. ಮಾವಿನಎಲೆ ಕೇವಲ ಹಬ್ಬದ ವಾತಾವರಣ ಸೃಷ್ಟಿಸುವುದು ಮಾತ್ರವಲ್ಲ ಶುಭಸೂಚಕವೂ ಹೌದು. ಇದು ಮನೆ ಮಂದಿಗೆ ಅದೃಷ್ಟವನ್ನು ತಂದುಕೊಡುತ್ತದೆ ಎಂದು ನಂಬಲಾಗಿದೆ. ಹಸಿರು ತೋರಣ ಮನಸಿಗೆ ಹೊಸ ಉಲ್ಲಾಸ ಕೊಡುತ್ತದೆ.

* ಹೂಗಳು ಅಂದ: ಮನೆಯ ಮುಖ್ಯ ದ್ವಾರ ಮತ್ತು ಪೂಜಾ ಕೊಠಡಿಯನ್ನು ಶುಚಿಗೊಳಿಸಿದ ಬಳಿಕ ಮಲ್ಲಿಗೆ ದಂಡೆಯಿಂದ ಅದನ್ನು ಅಲಂಕರಿಸಿ. ಈ ಹೂವು ಮನೆ ಪೂರ್ತಿ ಸುವಾಸನೆ ಹರಡುತ್ತದೆ. ಇನ್ನು ಮನೆಯ ಮುಂದಿನ ತುಳಸಿ ಗಿಡಕ್ಕೆ  ಬೇವು, ಹೂಗಳನ್ನು ಕಟ್ಟಿರಿ. ದೇವರ ಮನೆಯಲ್ಲಿ ಹಚ್ಚುವ ಗಂಧ, ತುಳಸಿ, ಸಾಂಬ್ರಾಣಿಯ ಪರಿಮಳ ಮನೆಯಲ್ಲಿ ಹರಡಿದರೆ ಮನೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುತ್ತದೆ.

* ರಂಗೋಲಿ: ಮನೆ ಮುಂದೆ, ದೇವರ ಕೋಣೆಯಲ್ಲಿ ಆಕರ್ಷಕವಾದ ರಂಗೋಲಿ ಚಿತ್ತಾರಗಳನ್ನು ಬಿಡಿಸಿದರೆ ಮನೆಯ ಅಂದ ಹೆಚ್ಚುತ್ತದೆ. ಲಕ್ಷ್ಮಿ ಕಳೆ ಎದ್ದು ಕಾಣುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry