ಬ್ರಿಟನ್‌ ವಿರುದ್ಧ ರಷ್ಯಾ ಪ್ರತೀಕಾರ

ಮಂಗಳವಾರ, ಮಾರ್ಚ್ 19, 2019
26 °C
ಡಬಲ್‌ ಏಜೆಂಟ್‌ ಮೇಲೆ ರಾಸಾಯನಿಕ ದಾಳಿ

ಬ್ರಿಟನ್‌ ವಿರುದ್ಧ ರಷ್ಯಾ ಪ್ರತೀಕಾರ

Published:
Updated:
ಬ್ರಿಟನ್‌ ವಿರುದ್ಧ ರಷ್ಯಾ ಪ್ರತೀಕಾರ

ಮಾಸ್ಕೊ/ಲಂಡನ್ : ರಷ್ಯಾದ ಮಾಜಿ ಡಬಲ್‌ ಏಜೆಂಟ್‌ ಮೇಲೆ ನಡೆದ ರಾಸಾಯನಿಕ ದಾಳಿ ಸಂಬಂಧ 23 ರಾಜತಾಂತ್ರಿಕ ಅಧಿಕಾರಿಗಳನ್ನು ಗಡಿಪಾರು ಮಾಡುವ ಬ್ರಿಟನ್‌ ಕ್ರಮಕ್ಕೆ ಪ್ರತಿಯಾಗಿ ತನ್ನ ದೇಶದಲ್ಲಿರುವ ಬ್ರಿಟನ್‌ನ ಪ್ರತಿನಿಧಿಗಳನ್ನು ದೇಶದಿಂದ ಹೊರಹಾಕಲು ರಷ್ಯಾ ನಿರ್ಧರಿಸಿದೆ.

ದಾಳಿ ಹಿಂದೆ ರಷ್ಯಾ ಕೈವಾಡ ಇದೆ ಎಂಬುದು ಬ್ರಿಟನ್ ವಾದ. ಆದರೆ ಈ ಆರೋಪವನ್ನು ರಷ್ಯಾ ನಿರಾಕರಿಸಿದೆ.

‘ರಷ್ಯಾದ ಕೈವಾಡ ತಳ್ಳಿಹಾಕುವಂತಿಲ್ಲ. ಏಕೆಂದರೆ ಸರ್ಗಿ ಸ್ಕ್ರಿಪಲ್ ಮೇಲಿನ ದಾಳಿಗೆ ಬಳಕೆಯಾದ ರಾಸಾಯನಿಕವು ರಷ್ಯಾಕ್ಕೆ ಮಾತ್ರ ಲಭ್ಯವಿದೆ. ಈ ವಿಚಾರವನ್ನು ರಷ್ಯಾ ಅನಗತ್ಯವಾಗಿ ವೈಭವೀಕರಿಸುತ್ತಿದೆ’ ಎಂದು ಬ್ರಿಟನ್‌ನ ವಿದೇಶಾಂಗ ಕಾರ್ಯದರ್ಶಿ ಬೋರಿಸ್ ಜಾನ್ಸನ್ ಗುರುವಾರ ಸಂದರ್ಶನದಲ್ಲಿ ಹೇಳಿದ್ದಾರೆ.

ಅಮೆರಿಕ ಬೆಂಬಲ (ವಾಷಿಂಗ್ಟನ್ ವರದಿ): ಬ್ರಿಟನ್‌ನ ನಿರ್ಧಾರವನ್ನು ಬೆಂಬಲಿಸುವುದಾಗಿ ಅಮೆರಿಕ ಬುಧವಾರ ಹೇಳಿದೆ. ‘ರಷ್ಯಾದ ಅಧಿಕಾರಿಗಳನ್ನು ಗಡಿಪಾರು ಮಾಡುವ ಬ್ರಿಟನ್‌ನ ನಿರ್ಧಾರವು ರಷ್ಯಾದ ಕ್ರಿಯೆಗೆ ಪ್ರತಿಕ್ರಿಯೆ’ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್ ಹೇಳಿದ್ದಾರೆ.

ನಿರ್ದಿಷ್ಟ ಕ್ರಮ:ರಾಸಾಯನಿಕ ದಾಳಿ ಪ್ರಕರಣದಲ್ಲಿ ರಷ್ಯಾದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯಲ್ ಮ್ಯಾಕ್ರನ್ ಹೇಳಿದ್ದಾರೆ. ನಿರ್ದಿಷ್ಟ ಕ್ರಮಗಳ ಬಗ್ಗೆ ಮುಂದಿನ ದಿನಗಳಲ್ಲಿ ವಿವರಿಸುವುದಾಗಿ ಅವರು ತಿಳಿಸಿದ್ದಾರೆ. ಜರ್ಮನಿ ಕೂಡ ಈ ಪ್ರಕರಣದಲ್ಲಿ ರಷ್ಯಾವನ್ನು ಖಂಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry