ಜ್ಯೋತಿ ನಿವಾಸ ತಂಡಕ್ಕೆ ಸಮಗ್ರ ಪ್ರಶಸ್ತಿ

7

ಜ್ಯೋತಿ ನಿವಾಸ ತಂಡಕ್ಕೆ ಸಮಗ್ರ ಪ್ರಶಸ್ತಿ

Published:
Updated:

ಬೆಂಗಳೂರು: ಹೊಸೂರು ರಸ್ತೆಯಲ್ಲಿ ರುವ ಜ್ಯೋತಿ ನಿವಾಸ ಸ್ವಾಯತ್ತ ಕಾಲೇಜು ಮಹಿಳಾ ತಂಡದವರು ಎಸ್‌ಪಿಎಚ್‌ವೈಜಿಎಂಯುಎಸ್‌–2018 ಅಂತರ ಕಾಲೇಜು ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಜಯಿಸಿದ್ದಾರೆ.

ಈ ತಂಡ ಸಾಫ್ಟ್‌ಬಾಲ್‌ನಲ್ಲಿ ಪ್ರಶಸ್ತಿ ಗೆದ್ದರೆ, ಫುಟ್‌ಬಾಲ್‌ ಮತ್ತು ಥ್ರೋಬಾಲ್‌ನಲ್ಲಿ ರನ್ನರ್ಸ್‌ ಅಪ್‌ ಸಾಧನೆ ಮಾಡಿತು. ಪುರುಷರ ವಿಭಾಗದಲ್ಲಿ ಎಸ್‌ಜೆಸಿಸಿ ಮತ್ತು ಕ್ರೈಸ್ಟ್‌ ಕಾಲೇಜು ತಂಡದವರು ಜಂಟಿಯಾಗಿ ಸಮಗ್ರ ಪ್ರಶಸ್ತಿ ಪಡೆದರು.ಕ್ರೈಸ್ಟ್‌ ಕಾಲೇಜು ತಂಡ ಬ್ಯಾಸ್ಕೆಟ್‌ಬಾಲ್‌ನಲ್ಲಿ ಚಾಂಪಿಯನ್‌ ಆದರೆ, ಎಸ್‌ಜೆಸಿಸಿ ರನ್ನರ್ಸ್‌ ಅಪ್‌ ಆಯಿತು. ಫುಟ್‌ಬಾಲ್‌ನಲ್ಲಿ ಎಸ್‌ಜೆಸಿಸಿ ಪ್ರಶಸ್ತಿ ಜಯಿಸಿತು. ಕ್ರೈಸ್ಟ್‌ ಕಾಲೇಜು ಎರಡನೇ ಸ್ಥಾನ ಗಳಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry