ಫಿಫಾ ರ‍್ಯಾಂಕಿಂಗ್‌: ಭಾರತಕ್ಕೆ 99ನೇ ಸ್ಥಾನ

ಮಂಗಳವಾರ, ಮಾರ್ಚ್ 26, 2019
27 °C

ಫಿಫಾ ರ‍್ಯಾಂಕಿಂಗ್‌: ಭಾರತಕ್ಕೆ 99ನೇ ಸ್ಥಾನ

Published:
Updated:
ಫಿಫಾ ರ‍್ಯಾಂಕಿಂಗ್‌: ಭಾರತಕ್ಕೆ 99ನೇ ಸ್ಥಾನ

ನವದೆಹಲಿ (ಪಿಟಿಐ): ಭಾರತ ಫುಟ್‌ಬಾಲ್‌ ತಂಡವು ಫಿಫಾ ವಿಶ್ವ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಈ ವರ್ಷ ಮೊದಲ ಬಾರಿಗೆ 100ರೊಳಗಿನ ಸ್ಥಾನ ಪಡೆದುಕೊಂಡಿದೆ.

ಗುರುವಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಭಾರತ ತಂಡವು ಮೂರು ಸ್ಥಾನಗಳಲ್ಲಿ ಏರಿಕೆಯಾಗಿದೆ. ಇದರಿಂದಾಗಿ 99ನೇ ಸ್ಥಾನ ಪಡೆದುಕೊಂಡಿದೆ. ಭಾರತ ತಂಡದ ಬಳಿ 339 ಪಾಯಿಂಟ್ಸ್‌ಗಳು ಇವೆ. ಲಿಬಿಯಾ ಕೂಡ ಇದೇ ಸ್ಥಾನವನ್ನು ಹಂಚಿಕೊಂಡಿದೆ.

ವಿಶ್ವ ಚಾಂಪಿಯನ್ ಜರ್ಮನಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ನಂತರದಲ್ಲಿ ಬ್ರೆಜಿಲ್‌, ಪೋರ್ಚುಗಲ್‌, ಅರ್ಜೆಂಟೀನಾ, ಬೆಲ್ಜಿಯಂ, ಪೋಲೆಂಡ್‌, ಸ್ಪೇನ್‌, ಸ್ವಿಟ್ಜರ್‌ಲೆಂಡ್‌, ಫ್ರಾನ್ಸ್‌ ಮತ್ತು ಚಿಲಿ ತಂಡಗಳು ಇವೆ.

ಹೋದ ವರ್ಷ ಭಾರತ ಮೂರು ಬಾರಿ 100ರೊಳಗಿನ ಸ್ಥಾನ ಪಡೆದಿತ್ತು. ಜುಲೈನಲ್ಲಿ 96ನೇ ಸ್ಥಾನ ಗಳಿಸಿತ್ತು. ಏಷ್ಯಾಮಟ್ಟದಲ್ಲಿ ಭಾರತಕ್ಕೆ 13ನೇ ಸ್ಥಾನ ಲಭಿಸಿದೆ. ಕತಾರ್, ಒಮನ್‌, ಜೋರ್ಡನ್‌, ಬಹರೇನ್‌ ಮತ್ತು ಉತ್ತರ ಕೊರಿಯ ತಂಡಗಳು ಭಾರತದ ನಂತರದ ಸ್ಥಾನಗಳಲ್ಲಿವೆ.

ಇರಾನ್‌ (ಒಟ್ಟಾರೆ 33ನೇ ಸ್ಥಾನ) ಅಗ್ರಸ್ಥಾನದಲ್ಲಿದೆ. ನಂತರದಲ್ಲಿ ಆಸ್ಟ್ರೇಲಿಯಾ (37) ಹಾಗೂ ಜಪಾನ್‌ (55) ತಂಡಗಳು ಇವೆ.

ಭಾರತ ತಂಡ ಮಾರ್ಚ್‌27ರಂದು ನಡೆಯುವ ಎಎಫ್‌ಸಿಏಷ್ಯನ್‌ ಕಪ್‌ ಕ್ವಾಲಿಫೈಯರ್ ಪಂದ್ಯದಲ್ಲಿ ಕಿರ್ಗಿಸ್‌ ರಿಪಬ್ಲಿಕ್‌ ಎದುರು ಆಡಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry