ಮಹಿಳಾ ದೌರ್ಜನ್ಯ: ರಂಜನೀಯ ಸರಕಲ್ಲ

7
ಚಿಂತನಾಗೋಷ್ಠಿಯಲ್ಲಿ ಬರಹಗಾರ್ತಿ ಗಾಯತ್ರಿ ಶೇಷಾದ್ರಿ ಹೇಳಿಕೆ

ಮಹಿಳಾ ದೌರ್ಜನ್ಯ: ರಂಜನೀಯ ಸರಕಲ್ಲ

Published:
Updated:
ಮಹಿಳಾ ದೌರ್ಜನ್ಯ: ರಂಜನೀಯ ಸರಕಲ್ಲ

ಶೃಂಗೇರಿ: ಮಹಿಳೆಯರ ಮೇಲಿನ ಆತ್ಯಾಚಾರ, ಲೈಂಗಿಕ ಕಿರುಕುಳ, ಕೊಲೆಯಂತಹ ಕೃತ್ಯಗಳು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಇದು ಸಹಜವಾದ ಸುದ್ದಿ ಎಂಬ ಭಾವ ನಮ್ಮನ್ನು ತಟಸ್ಥಗೊಳಿಸುತ್ತದೆ. ಇದು ಬದಲಾಗಬೇಕು ಎಂದು ತೀರ್ಥಹಳ್ಳಿಯ ಬರಹಗಾರ್ತಿ ಗಾಯತ್ರಿ ಶೇಷಾದ್ರಿ ತಿಳಿಸಿದರು.

ಶೃಂಗೇರಿ ತಾಲ್ಲೂಕಿನ ಮೆಣಸೆ ಹೊಸ್ತೋಟದ ಕೃಷಿಮಿತ್ರಕೂಟ ಗುರು ವಾರ ಆಯೋಜಿಸಿದ ‘ಮಹಿಳೆ ಯರು ಹಾಗೂ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಕಾರಣವೇನು?’ ಕುರಿತ ಚಿಂತನಾ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ ಜನಸಮುದಾಯ ಆರೋಪಿಯನ್ನು ಹೊಡೆದು ಮತ್ತೆ ಬಿಟ್ಟು ಬಿಡುವ ಸಂಸ್ಕೃತಿ ನಮ್ಮದು. ಆಕೆಯ ಮೇಲೆ ಆಗುವ ಕಿರುಕುಳವನ್ನು ರಂಜನೀಯ ಸರಕನ್ನಾಗಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗು ತ್ತಿರುವುದು ವಿಷಾದನೀಯ ಎಂದ ರು.

ರಾಜರ ಕಾಲದಿಂದಲೂ ಇಂದಿನ ತನಕ ಯುದ್ಧ, ಜಾತಿ, ಧರ್ಮ, ಗಡಿ, ಸಂಘರ್ಷದ ಸಂದರ್ಭ ಗಳಲ್ಲಿ ಮಹಿಳೆಯರು ಮುಖ್ಯ ಗುರಿಯಾಗಿ ರುತ್ತಾರೆ. ಜಾಗತಿಕ ಮಹಾಯುದ್ಧಗಳಲ್ಲಿ ಗೆದ್ದು ದಣಿದ ಸೈನಿಕರಿಗೆ ಸೋತ ದೇಶದ ಸಹಸ್ರಾರು ಮಹಿಳೆಯರನ್ನು ಹೊತ್ತೊಯ್ದ ಇತಿಹಾಸವಿದೆ ಎಂದರು.

ಸಾಹಿತಿ ಕಲ್ಕುಳಿ ವಿಠಲ ಹೆಗಡೆ ಮಾತನಾಡಿ, ‘ನಮ್ಮದು ಪುರುಷ ಪ್ರಧಾನವಾದ ಸಮಾಜ. ಸಮಾಜದ ಅಸಮಾನತೆ ಹೋಗಲಾಡಿಸಿದಾಗ ಮಾತ್ರ ಸ್ತ್ರೀಯರು ಸುರಕ್ಷಿತದಿಂದ ಇರಲು ಸಾಧ್ಯ. ಈ ದೇಶದಲ್ಲಿ ಸಂಸ್ಕೃತಿ ಉಳಿಯಬೇಕಾದರೆ ಸಮಾ ನತೆ ಇರಬೇಕು. ವೈಜ್ಞಾನಿಕವಾಗಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಶಕ್ತಿಶಾಲಿ. ಸಮಾಜದ ವ್ಯವಸ್ಥೆಗಳು ಬದಲಾಗಬೇಕಿದೆ. ಧಾರ್ಮಿಕ ಕಟ್ಟುಪಾಡುಗಳ ನಡುವೆ ಹೆಣ್ಣು ಉಸಿ ರುಗಟ್ಟಿ ಬದುಕು ಸಾಗುತ್ತಿದ್ದಾಳೆ. ಸಮಾಜದ ದೃಷ್ಟಿಕೋನಗಳು ಬದಲಾ ದರೆ ಮಾತ್ರ ಮಹಿಳೆಯರ ಮೇಲಿನ ಕಿರು ಕುಳ ಕಡಿಮೆಯಾಗಲು ಸಾಧ್ಯ. ದೇಶದ ಕಾನೂನುಗಳು ಇನ್ನಷ್ಟು ಕಠಿಣವಾ ಗಬೇಕು. ಆಗ ಮಾತ್ರ ಹೆಣ್ಣು ಸ್ವತಂತ್ರ್ಯ ವಾಗಿ ಜೀವಿಸಬಲ್ಲಳು’ ಎಂದರು.

ಅಧ್ಯಕ್ಷತೆಯನ್ನು ಕೃಷಿಕ ಗೋಪಾಲ್‌ ಗೌಡ ವಹಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ನರಸಿಂಹ, ತ್ರಿಮೂರ್ತಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry