ಅಧ್ಯಕ್ಷ ಸ್ಥಾನಕ್ಕೆ 3, ಮಂಡಳಿಗೆ 32 ಜನ ಸ್ಪರ್ಧೆ

7
ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಚುನಾವಣೆ

ಅಧ್ಯಕ್ಷ ಸ್ಥಾನಕ್ಕೆ 3, ಮಂಡಳಿಗೆ 32 ಜನ ಸ್ಪರ್ಧೆ

Published:
Updated:
ಅಧ್ಯಕ್ಷ ಸ್ಥಾನಕ್ಕೆ 3, ಮಂಡಳಿಗೆ 32 ಜನ ಸ್ಪರ್ಧೆ

ಕಲಬುರ್ಗಿ: ಪ್ರತಿಷ್ಠಿತ ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಚುನಾವಣಾ ಕಣದಲ್ಲಿ 35 ಅಭ್ಯರ್ಥಿಗಳು ಇದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಮೂವರು, ಒಂದು ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರು ಹಾಗೂ ಆಡಳಿತ ಮಂಡಳಿಯ 13 ಸ್ಥಾನಗಳಿಗೆ 30 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ನಾಮಪತ್ರ ವಾಪಸ್‌ ಪಡೆಯಲು ಗುರುವಾರ ಕೊನೆಯ ದಿನವಾಗಿತ್ತು. ಯಾರೂ ಉಮೇದುವಾರಿಕೆ ವಾಪಸ್‌ ಪಡೆಯಲಿಲ್ಲ. ಅಭ್ಯರ್ಥಿಗಳ ಅಂತಿಮಪಟ್ಟಿಯನ್ನು ಚುನಾವಣಾಧಿಕಾರಿ ಡಾ.ಪಿ.ಎಸ್‌.ಶಂಕರ ಅವರು ಪ್ರಕಟಿಸಿದರು.

‘ಮಾ.23ರಂದು ಬೆಳಿಗ್ಗೆ 8ರಿಂದ ಸಂಜೆ 5ರ ವರೆಗೆ ಮತದಾನ ಹಾಗೂ ಮಾ.24ರಂದು ಕಲಬುರ್ಗಿಯಲ್ಲಿ ಬೆಳಿಗ್ಗೆ 8ರಿಂದ ಮತ ಎಣಿಕೆ ನಡೆಯಲಿದೆ’ ಎಂದು ಸಹಾಯಕ ಚುನಾವಣಾಧಿಕಾರಿಗಳಾದ ಡಾ.ಸಿದ್ದರಾಮ ಪಾಟೀಲ ಮತ್ತು ಕೆ.ಬಿ.ಮುತ್ತಾ ಮಾಹಿತಿ ನೀಡಿದರು.

ಅಧ್ಯಕ್ಷ ಸ್ಥಾನಕ್ಕೆ ಬಸವರಾಜ ಶಿವಶಂಕ್ರಪ್ಪ ಭೀಮಳ್ಳಿ, ಡಾ.ಭೀಮಾಶಂಕರ ಚಂದ್ರಶೇಖರ ಬಿಲಗುಂದಿ, ರಾಜಶೇಖರ ಎ.ನಿಪ್ಪಾಣಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಡಾ.ಶಿವಾನಂದ ಎಸ್‌.ದೇವರಮನಿ, ಡಾ.ಸೂರ್ಯಕಾಂತ ಜಿ.ಪಾಟೀಲ ಸ್ಪರ್ಧಿಸಿದ್ದಾರೆ.

ಸಂಸ್ಥೆಯ ಈಗಿನ ಅಧ್ಯಕ್ಷ ಬಸವರಾಜ ಭೀಮಳ್ಳಿ ಹಾಗೂ ಡಾ.ಭೀಮಾಶಂಕರ ಬಿಲಗುಂದಿ ಅವರ ಗುಂಪುಗಳ ಮಧ್ಯೆ ನೇರಸ್ಪರ್ಧೆ ಏರ್ಪಟ್ಟಿದೆ.

ಈಗಿರುವ ಅಧ್ಯಕ್ಷ–ಉಪಾಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಒಂಬತ್ತು ಜನ ಪುನರಾಯ್ಕೆ ಬಯಸಿದ್ದಾರೆ. ಆದರೆ, ಆಡಳಿತ ಮಂಡಳಿಯ ಸದಸ್ಯರಾದ ವಿಧಾನ ಪರಿಷತ್‌ ಸದಸ್ಯ ಬಿ.ಜಿ. ಪಾಟೀಲ, ಶಿವಾನಂದ ಮಾನಕರ, ಅಶೋಕ ಪಾಟೀಲ, ಎ.ವಿ. ದೇಶಮುಖ ಸ್ಪರ್ಧಿಸಿಲ್ಲ.

ಈಗಿನ ಆಡಳಿತ ಮಂಡಳಿಯ ಅವಧಿ ಮಾರ್ಚ್‌ 31ಕ್ಕೆ ಕೊನೆಗೊಳ್ಳಲಿದ್ದು, ಏಪ್ರಿಲ್‌ 1ರಿಂದ ಹೊಸ ಆಡಳಿತ ಮಂಡಳಿ ರಚನೆಯಾಗಬೇಕಿದೆ.

ಭೀಮಳ್ಳಿ ಗುಂಪು

ಬಸವರಾಜ ಭೀಮಳ್ಳಿ (ಅಧ್ಯಕ್ಷ) ಗುಂಪಿನಲ್ಲಿ ಈಗಿನ ಉಪಾಧ್ಯಕ್ಷ ಡಾ.ಸೂರ್ಯಕಾಂತ ಜಿ.ಪಾಟೀಲ, ಆರ್‌.ಎಸ್‌. ಹೊಸಗೌಡ, ಅರುಣಕುಮಾರ ಎಂ.ವೈ.ಪಾಟೀಲ, ಡಾ.ಶರದ್‌ ಎಂ.ರಾಂಪುರೆ, ಡಾ.ಶರಣಬಸಪ್ಪ ಕಾಮರೆಡ್ಡಿ, ಜಿ.ಡಿ. ಅಣಕಲ್‌, ಚಂದ್ರಶೇಖರ ಹಿರೇಮಠ, ಶಿವರಾಜ ನಿಗ್ಗುಡಗಿ, ವೆಂಕಟೇಶ ಆರ್‌.ಸಾರಡಾ, ಎನ್‌.ಡಿ.ಪಾಟೀಲ, ಡಾ.ಬಸವರಾಜ ಜಿ.ಪಾಟೀಲ (ಬೀದರ್‌), ಡಾ.ಎಸ್‌.ಎನ್‌.ಪಾಟೀಲ, ಎಂ.ವೀರಣಗೌಡ (ರಾಯಚೂರು), ಉದಯಕುಮಾರ ಶಿವಪುತ್ರಪ್ಪ ಚಿಂಚೋಳಿ.

ಬಿಲಗುಂದಿ ಗುಂಪು

ಡಾ.ಭೀಮಾಶಂಕರ ಬಿಲಗುಂದಿ (ಅಧ್ಯಕ್ಷ) ಗುಂಪಿನಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಡಾ.ಶಿವಾನಂದ ಎಸ್‌.ದೇವರಮನಿ, ಆಡಳಿತ ಮಂಡಳಿಗೆ ಶಿವಶರಣಪ್ಪ ನಿಗ್ಗುಡಗಿ, ಸತೀಶ ಸಿ.ಹಡಗಲಿಮಠ (ರಾಜ್‌ ಪ್ರಿಂಟರ್ಸ್‌), ವಿಜಯಕುಮಾರ ಜೆ.ದೇಶಮುಖ, ಡಾ.ನಾಗೇಂದ್ರ ಎಸ್‌.ಮಂಠಾಳೆ, ಡಾ.ಸಂಪತ್‌ ಡಿ.ಲೋಯಾ, ಅನುರಾಧ ಎಂ.ದೇಸಾಯಿ, ವಿಶ್ವನಾಥರಡ್ಡಿ ಬಸವರಡ್ಡಿ ಇಟಗಿ, ವಿನಯ್‌ ಸುಭಾಷ ಪಾಟೀಲ, ಬಿಜಾಪುರ ಸುಭಾಷ ಬಸವರಾಜ, ಅನಿಲಕುಮಾರ ಎಸ್‌.ಮರಗೋಳ, ನಿತಿನ್‌ ಬಿ.ಜವಳಿ, ಸಂಗಮೇಶ್ವರ ಆರ್‌.ಗಂಗು (ಬೀದರ್‌), ಗಂಗಾಧರ ಡಿ.ಎಲಿ (ರಾಯಚೂರು).

ಗುರುತಿಸಿ ಕೊಳ್ಳದವರು

ಮಲ್ಲಿಕಾರ್ಜುನ ಕಪಾಟೆ, ಎಸ್‌.ಕೆ.ಹಿರೇಮಠ, ಶಿವಾನಂದ ಚುಕ್ಕಿ (ರಾಯಚೂರು), ನಾಗನಾಥ ಮಳಗೆ (ಬೀದರ್‌).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry