ಹೊಳೆವ ಬಟ್ಟಲು ಕಂಗಳು

7

ಹೊಳೆವ ಬಟ್ಟಲು ಕಂಗಳು

Published:
Updated:
ಹೊಳೆವ ಬಟ್ಟಲು ಕಂಗಳು

ಎದ್ದು ಕಾಣಿಸುವ ನಿಲುವು, ಅದಕ್ಕೆ ಹೊಂದುವ ಸುಂದರ ದೇಹಾಕೃತಿ, ಜೋಡಿ ದೀಪದಂತೆ ಬೆಳಗುವ ಬಟ್ಟಲು ಕಂಗಳು. ಮುದ್ದು ಮೊಗದ ಈ ಹುಡುಗಿ ನಡು ಬಳುಕಿಸಿ ಕ್ಯಾಟ್‌ವಾಕ್‌ ಮಾಡುತ್ತಾ, ಆತ್ಮವಿಶ್ವಾಸದಿಂದ ಎದೆಯುಬ್ಬಿಸಿ ರ‍್ಯಾಂಪ್‌ ತುದಿಯಲ್ಲಿ ನಿಂತು ನಗು ತುಳುಕಿಸಿದಾಗ ಮಿಸ್‌ ಮಂಗಳೂರು ಕಿರೀಟ ಒಲಿದು ಬಂದಿತ್ತು. ಮಿಸ್‌ ಕರ್ನಾಟಕ, ಮಿಸ್‌ ಬೆಂಗಳೂರು ಕಿರೀಟಗಳು ಮುಡಿಗೇರಿದವು.

ಇದೀಗ ಅದೇ ರ‍್ಯಾಂಪ್‌ ಸಖ್ಯ ಕರಾವಳಿ ಬೆಡಗಿ ಪೂಜಾ ಶೆಟ್ಟಿಯನ್ನು ಬಣ್ಣದ ಲೋಕಕ್ಕೆ ಕರೆ ತಂದಿದೆ.

ರಂಜಿತ್‌ ಸುವರ್ಣ ನಿರ್ದೇಶನದ ‘ದೊಂಬರಾಟ’ ಸಿನಿಮಾ ಮೂಲಕ ಕೋಸ್ಟಲ್‌ವುಡ್‌ಗೆ ಪದಾರ್ಪಣೆ ಮಾಡಿದ ಪೂಜಾ ಶೆಟ್ಟಿ ಈಗ ತುಳುವಿನ ಎರಡು ಬಹುನಿರೀಕ್ಷಿತ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

‘ನಾನು ರೂಪದರ್ಶಿಯಾಗಿ ಕೆಲಸ ಮಾಡಿದವಳು. ಈಗ ಐಟಿ ಎಂಜಿನಿಯರ್‌ ಆಗಿ ಕೆಲಸ ಮಾಡುವುದರ ಜತೆಗೆ ಮಾಡೆಲಿಂಗ್‌ ಮತ್ತು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಚಿತ್ರರಂಗಕ್ಕೆ ಬರುವ ಮುನ್ನ ಆ್ಯಡ್‌ ಶೂಟ್‌, ರ‍್ಯಾಂಪ್‌ವಾಕ್ ಅಂತ ಬ್ಯುಸಿಯಾಗಿದ್ದೆ. ಸುವರ್ಣ ವಾಹಿನಿಯಲ್ಲಿ ಪ್ರಸಾರಗೊಂಡ ‘ಪ್ಯಾಟೆ ಹುಡ್ಗೀರ್‌ ಹಳ್ಳಿ ಲೈಫು’ ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದೆ. ಅದೇ ಕಾರಣದಿಂದ ನನಗೆ ‘ದೊಂಬರಾಟ’ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು’ ಎಂದು ನೆನಪಿಸಿಕೊಳ್ಳುತ್ತಾರೆ.

‘ತುಳು ಸಿನಿಮಾಗಳಲ್ಲಿ ಕಾಮಿಡಿ ಕಲಾವಿದರೆ ವಿಜೃಂಭಿಸುತ್ತಾರೆ ನಿಜ. ಆದರೆ, ‘ಉಮಿಲ್‌’ನಲ್ಲಿ ನಾಯಕಿ ಪಾತ್ರಕ್ಕೂ ಮಹತ್ವವಿದೆ. ಈ ಚಿತ್ರದಲ್ಲಿ ನಾಯಕಿ ಕೂಡ ಕಾಮಿಡಿ ಸನ್ನಿವೇಶಗಳ ಒಂದು ಭಾಗವಾಗಿಯೇ ಇರುತ್ತಾಳೆ. ಅಂದರೆ, ಆಕೆ ಹೇಳುವ ಪ್ರತಿ ಸಂಭಾಷಣೆಯಲ್ಲೂ ಹಾಸ್ಯರಸದ ಸಂಚಾರವಿದೆ. ಆದರೆ, ‘ಅಮ್ಮೆರ್‌ ಪೊಲೀಸ’ ಔಟ್‌ ಅಂಡ್‌ ಔಟ್‌ ಕಾಮಿಡಿ ಸಿನಿಮಾ’ ಎನ್ನುತ್ತಾರೆ ಪೂಜಾ.

ಚಿತ್ರರಂಗದಲ್ಲಿ ಮಿಂಚಬೇಕು ಎನ್ನುವ ಆಸೆ ಇರಿಸಿಕೊಂಡಿರುವ ಪೂಜಾ ಫಿಟ್‌ನೆಸ್ ಕಾಪಾಡಿಕೊಳ್ಳುವ ಔಚಿತ್ಯ ಅರಿತಿದ್ದಾರೆ.

‘ಪ್ರತಿದಿನವೂ ಜಿಮ್‌ಗೆ ಹೋಗುತ್ತೇನೆ. ಹಿತಮಿತವಾಗಿ ತಿನ್ನುವ ಅಭ್ಯಾಸ ಇಟ್ಟುಕೊಂಡಿದ್ದೇನೆ. ಜಿಮ್‌ನಲ್ಲಿ ವರ್ಕೌಟ್‌ ಮಾಡಿ ಬೆವರಿಳಿಸುತ್ತೇನೆ. ಇದೇ ನನ್ನ ಫಿಟ್‌ನೆಸ್‌ ಮಂತ್ರ’ ಎಂದು ಫಿಟ್‌ನೆಸ್ ಗುಟ್ಟು ಹಂಚಿಕೊಳ್ಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry