ಫೆಬ್ರುವರಿಯಲ್ಲಿ ಎರಡು ದಿನ ಶಮಿ ಹೋಟೆಲ್‌ನಲ್ಲಿ ತಂಗಿದ್ದು ನಿಜ: ಬಿಸಿಸಿಐ ಮಾಹಿತಿ

7

ಫೆಬ್ರುವರಿಯಲ್ಲಿ ಎರಡು ದಿನ ಶಮಿ ಹೋಟೆಲ್‌ನಲ್ಲಿ ತಂಗಿದ್ದು ನಿಜ: ಬಿಸಿಸಿಐ ಮಾಹಿತಿ

Published:
Updated:
ಫೆಬ್ರುವರಿಯಲ್ಲಿ ಎರಡು ದಿನ ಶಮಿ ಹೋಟೆಲ್‌ನಲ್ಲಿ ತಂಗಿದ್ದು ನಿಜ: ಬಿಸಿಸಿಐ ಮಾಹಿತಿ

ನವದೆಹಲಿ: ಭಾರತದ ಕ್ರಿಕೆಟ್‌ ತಂಡದ ವೇಗಿ ಮೊಹಮ್ಮದ್‌ ಶಮಿ ಅವರು ಫೆ. 17, 18 ರಂದು ದುಬೈನ ಹೋಟೆಲ್‌ನಲ್ಲಿ ತಂಗಿದ್ದರು ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಹಿತಿ ನೀಡಿರುವುದಾಗಿ ಎಂದು ಕೋಲ್ಕತ್ತ ಅಪರಾಧ ವಿಭಾಗದ ಅಧಿಕಾರಿ ಪ್ರವೀಣ್‌ ತ್ರಿಪಾಟಿ ತಿಳಿಸಿದ್ದಾರೆ. 

ಶಮಿ ಅವರ ಕಳೆದ ತಿಂಗಳ ವೇಳಾಪಟ್ಟಿಯನ್ನು ನೀಡುವಂತೆ ಕೋರಿ ಕೋಲ್ಕತ್ತ ಪೊಲೀಸರು ಬಿಸಿಸಿಐಗೆ ಮನವಿ ಮಾಡಿದ್ದರು. ಈ ಕುರಿತು ಬಿಸಿಸಿಐ ಮಂಗಳವಾರ ಸ್ಪಷ್ಟನೆ ನೀಡಿದೆ.

ಶಮಿ ಪತ್ನಿ ಹಸೀನ್ ಜೋಹಾನ್ ಅವರು ಶಮಿ ಹಾಗೂ ಕುಟುಂಬದ ನಾಲ್ವರ ವಿರುದ್ಧ ಕೊಲೆಯತ್ನ, ಕೊಲೆ ಬೆದರಿಕೆ, ಹಿಂಸಾಚಾರದ ಬಗ್ಗೆ ಕೋಲ್ಕತ್ತದ ಜಾಧವ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಜೋಹಾನ್‌ ನೀಡಿರುವ ದೂರಿನ ಅನ್ವಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ.... 

ಮೊಹಮ್ಮದ್ ಶಮಿ, ಆತನ ಸಹೋದರ ವಿರುದ್ಧ ದೂರು ದಾಖಲಿಸಿದ ಪತ್ನಿ ಹಸೀನ್

ಆತ ದೊಡ್ಡ ಮೋಸಗಾರ, ಮದುವೆಯಾದ ದಿನದಿಂದಲೂ ನನ್ನನ್ನು ಹೆಂಡತಿಯಂತೆ ಕಂಡಿಲ್ಲ: ಕ್ರಿಕೆಟಿಗ ಶಮಿ ವಿರುದ್ಧ ಪತ್ನಿ ಆರೋಪ

ಮೊಹಮ್ಮದ್ ಶಮಿ ವಿರುದ್ಧದ ಆರೋಪ: ಮೌನ ಮುರಿದ ಪಾಕಿಸ್ತಾನಿ ಯುವತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry