ಸಕ್ರಮ ಮಾಡಿಕೊಳ್ಳದಿದ್ದರೆ ಆಸ್ತಿ ಮುಟ್ಟುಗೋಲು

7
ಅಕ್ರಮ ಶೆಡ್‌: ಸಾಮಾನ್ಯಸಭೆಯಲ್ಲಿ ಅಧ್ಯಕ್ಷ ನಾಗಪ್ಪ ಹೇಳಿಕೆ

ಸಕ್ರಮ ಮಾಡಿಕೊಳ್ಳದಿದ್ದರೆ ಆಸ್ತಿ ಮುಟ್ಟುಗೋಲು

Published:
Updated:

ಅಫಜಲಪುರ: ‘ಪಟ್ಟಣದಲ್ಲಿ ರಸ್ತೆಯ ಬದಿ ಮತ್ತು ಇತರೆಡೆ ಅಕ್ರಮ ಶೆಡ್‌ಗಳು ನಿರ್ಮಾಣವಾಗಿದ್ದು, ಅವುಗಳ ಸಕ್ರಮಕ್ಕೆ 3 ನೋಟಿಸ್‌ ಕೊಡಿ. ಆದರೂ ಅವರು ಸಕ್ರಮ ಮಾಡಿಕೊಳ್ಳದಿದ್ದರೆ ಅವರ ಶೆಡ್‌ ಗಳನ್ನು ಮುಟ್ಟುಗೋಲು ಹಾಕಿಕೊಳ್ಳಿ’ ಎಂದು ಪುರಸಭೆ ಅಧ್ಯಕ್ಷ ನಾಗಪ್ಪ ಆರೇಕರ ತಿಳಿಸಿದರು.

ಇಲ್ಲಿನ ಪುರಸಭೆಯಲ್ಲಿ ಶನಿವಾರ ನಡೆದ ಸಾಮಾನ್ಯಸಭೆಯಲ್ಲಿ ಮಾತ ನಾಡಿದ ಅವರು, ‘ಅಕ್ರಮ ಶೆಡ್‌ ಗಳ ಸಕ್ರಮಕ್ಕೆ ತಕ್ಷಣ ಪುರಸಭೆ ಸಿಬ್ಬಂದಿ ಮುಂದಾಗಬೇಕು. ಅಂತಹ ಶೆಡ್‌ಗಳಿಗೆ ಹೆಚ್ಚು ತೆರಿಗೆ ವಿಧಿಸಬೇಕು’ ಎಂದರು.

‘ತಹಶೀಲ್ದಾರ್ ಕಚೇರಿ ಹತ್ತಿರ ಕೋಳಿಗಳ ತ್ಯಾಜ್ಯವಸ್ತು ಬಿಸಾಡುತ್ತಿ ದ್ದಾರೆ. ಅವರಿಗೆ ನೋಟಿಸ್‌ ಕೊಡಿ’ ಎಂದು ಸೂಚಿಸಿದರು.

‘ಬಸವೇಶ್ವರ ವೃತ್ತದಲ್ಲಿ ಶೌಚಾಲಯ ಮತ್ತು ಮೂತ್ರ ವಿಸರ್ಜನೆ ನಿರ್ಮಾಣ ಮಾಡಬೇಕು. ಅದಕ್ಕಾಗಿ ದಾಮಾ ಅಡತಿ ಹತ್ತಿರ ಸ್ಥಳ ಪರಿಶೀಲನೆ ಮಾಡಿ ಅದನ್ನು ಪುರಸಭೆ ಸ್ವಾಧೀನಕ್ಕೆ ಪಡೆದು ಕೊಳ್ಳಬೇಕು’ ಎಂದು ಮುಖ್ಯಾಧಿಕಾರಿಗೆ ಆದೇಶಿಸಿದರು.

ಸದಸ್ಯರಾದ ಶಿವಪುತ್ರಪ್ಪ ಮನ್ಮಿ, ಸಿದ್ದರಾಮಪ್ಪ ಗಣಾಚಾರಿ, ರೆಹಮತ್ ಜಾಗೀರದಾರ, ಹನುಮಂತ ವಡ್ಡರ, ಬಸವರಾಜ ವಾಳಿ ಮಾಹಿತಿ ನೀಡಿ, ‘ಪುರಸಭೆಯಲ್ಲಿ ಹಳೆಯ ಪರಿಕರಗಳು ಮತ್ತಷ್ಟು ಹಾಳಾಗುತ್ತಿವೆ. ಅವುಗಳನ್ನು ಹರಾಜು ಮಾಡಬೇಕು’ ಎಂದರು.

ಹಿರಿಯ ಆರೋಗ್ಯ ನಿರೀಕ್ಷಕ ಮಹಾವೀರ ಠಕಾಳೆ ಸಭೆಗೆ ಮಾಹಿತಿ ನೀಡಿ, ‘ಸದಸ್ಯರು ತಮ್ಮ ವಾರ್ಡ್‌ನಲ್ಲಿ ಸ್ವಚ್ಛತೆ ಬಗ್ಗೆ ಸಮಸ್ಯೆಯಿದ್ದರೆ ಮಾಹಿತಿ ನೀಡಬೇಕು’ ಎಂದು ಕೋರಿದರು.

ಪುರಸಭೆ ಅಧಿಕಾರಿ ಮಲ್ಲಿನಾಥ ಕಾಮದಿ ಅವರು ಹಿಂದಿನ ಸಭೆಯಲ್ಲಿ ಆದ ಠರಾವುಗಳನ್ನು ಓದಿ ದೃಢೀಕರಿಸಿಕೊಂಡರು. ಸಹಾಯಕ ನಿರ್ದೇಶಕರು ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಿಂದ ಅನುಮೋದನೆಯಾದ ರೂಪರೇಷೆಯಲ್ಲಿ ನಿವೇಶನಗಳು ಬಿಡುಗಡೆ ಮಾಡುವ ಕುರಿತು ಮಾಹಿತಿ ನೀಡಿದರು. 2018–19ನೇ ಸಾಲಿನ ವಾರದ ಹಾಗೂ ದಿನದ ಬಜಾರ ಹರಾಜು ಕುರಿತು ಶೀಘ್ರದಲ್ಲಿ ಸಭೆ ಕರೆದು ದಿನಾಂಕ ನಿಗದಿ ಮಾಡಲಾಗುವುದು ಎಂದು ಅವರು ಸಭೆಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry