ಬಸವಣ್ಣನಿಗೆ ಅಪಚಾರ!

7

ಬಸವಣ್ಣನಿಗೆ ಅಪಚಾರ!

Published:
Updated:

ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಸ್ಥಾನ ನೀಡುವ ವಿಚಾರ ಮುನ್ನೆಲೆಗೆ ಬಂದ ನಂತರ ಕೆಲವು ಸ್ವಾಮಿಗಳು ಮನಸ್ಸಿಗೆ ಬಂದಂತೆ ಮಾತನಾಡುತ್ತಿರುವುದು ಬಸವಣ್ಣನಿಗೆ ಮಾಡುತ್ತಿರುವ ಅಪಚಾರವೇ ಆಗಿದೆ.

ಈ ವಿವಾದ ಸೃಷ್ಟಿಯಾದಾಗಿನಿಂದ ಪಂಚಾಚಾರ್ಯರನ್ನು ನಿಂದಿಸುವುದೇ ತೋಂಟದ ಸಿದ್ಧಲಿಂಗ ಸ್ವಾಮೀಜಿ ಕಾಯಕವಾಗಿದೆ. ‘ಇದಿರ ಹಳಿಯಲು ಬೇಡ... ಇದೇ ಅಂತರಂಗ ಶುದ್ಧಿ’ ಎಂದು ಬಸವಣ್ಣ ಹೇಳಿದ್ದು, ಅವರಿಗೆ ಅರ್ಥವಾಗಿಲ್ಲವೇ? ಪಂಚಾಚಾರ್ಯರಿಗೂ ಭಕ್ತರು ಇದ್ದಾರೆ. ಈ ಸ್ವಾಮಿಗಳನ್ನು ಟೀಕಿಸುವುದರಿಂದ ಅವರ ಭಕ್ತರ ಮನಸ್ಸಿಗೆ ನೋವಾಗುತ್ತದೆ ಎಂಬ ಜ್ಞಾನ ಇವರಿಗೆ ಇಲ್ಲವೇ? ಇನ್ನಾದರೂ ಅವರು ಬದಲಾಗಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry