7

ಯಾರು ಜನಪರ?

Published:
Updated:

ರಾಜ್ಯಸಭಾ ಚುನಾವಣೆಯ ಸ್ಪರ್ಧಾಳುಗಳ ಆಸ್ತಿ ವಿವರ (ಪ್ರ.ವಾ., ಮಾ. 13) ಗಮನಿಸಿದರೆ ಮಹಾತ್ಮ ಗಾಂಧಿ ಪ್ರತಿಪಾದಿಸಿದ ಸರಳತೆಯ ರಾಜಕೀಯ ಕಣ್ಮರೆಯಾಗುತ್ತಿರುವುದು ಸ್ಪಷ್ಟವಾಗುತ್ತಿದೆ! ಒಂದು ಕಡೆ ರೈತರ ಆತ್ಮಹತ್ಯೆ, ಮತ್ತೊಂದು ಕಡೆ ವಿದ್ಯಾರ್ಥಿ ಸಮೂಹ, ಯುವ ಜನರ ಅತಂತ್ರ ಬದುಕು. ಆದರೆ ಲೋಕಸಭೆ– ರಾಜ್ಯಸಭೆಯಲ್ಲಿ ಈ ವಿಷಯಗಳ ಕುರಿತು ಚರ್ಚೆಯೇ ಆಗುತ್ತಿಲ್ಲ!

ಕೋಟ್ಯಧಿಪತಿಗಳೇ ಅಲ್ಲಿರುವಾಗ ಈ ಸಮಸ್ಯೆಗಳ ಕುರಿತು ಚರ್ಚೆಯಾಗುವುದಾದರೂ ಹೇಗೆ? ಆಶ್ಚರ್ಯವೆಂದರೆ ಶಾಸಕ, ಸಂಸದ, ಮಂತ್ರಿ– ಮಹೋದಯರ ಸಂಬಳ, ಸಾರಿಗೆ, ಭತ್ಯೆಗಳು ಚರ್ಚೆಗೊಳಗಾಗದೇ ಹೆಚ್ಚಳಗೊಳ್ಳುತ್ತಿವೆ. ಜನಪರವೆಂದು ಪ್ರಚಾರ ಗಿಟ್ಟಿಸಿಕೊಳ್ಳುವ ರಾಜಕಾರಣಿಗಳ ಸ್ವಾರ್ಥವೇ ಮೇಲುಗೈ ಪಡೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry