ಅಬಕಾರಿ ದಾಳಿ: ನಕಲಿ ಮದ್ಯ ವಶ

7

ಅಬಕಾರಿ ದಾಳಿ: ನಕಲಿ ಮದ್ಯ ವಶ

Published:
Updated:

ಮುದ್ದೇಬಿಹಾಳ: ಪಟ್ಟಣದ ತಂಗಡಗಿ ರಸ್ತೆಯಲ್ಲಿರುವ ಎಂ.ಎಸ್.ಸಾವಜಿ (ಮಾರುತಿ) ಧಾಬಾದಲ್ಲಿ ಅಂದಾಜು ₹ 8 ಲಕ್ಷ ಮೌಲ್ಯದ ನಕಲಿ ಮದ್ಯ ಹಾಗೂ ಸಾಗಾಟಕ್ಕೆ ಬಳಸಿದ ಕ್ರೂಸರ್, ದ್ವಿಚಕ್ರ ವಾಹನವನ್ನು ಅಬಕಾರಿ ಇಲಾಖೆಯ ಎ.ಎ.ಮುಜಾವರ್ ನೇತೃತ್ವದ ತಂಡ ದಾಳಿ ನಡೆಸಿ ವಶಪಡಿಸಿಕೊಂಡಿದೆ.

ಲಕ್ಷ್ಮಣ ಜಾಲಾಪುರ ಎಂಬುವವರಿಗೆ ಸೇರಿದ ಧಾಬಾದ ಮೇಲೆ ದಾಳಿ ನಡೆಸಿದ ತಂಡವು ಅಕ್ರಮವಾಗಿ ತಯಾರಿಸಿದ 172.80 ಲೀ. ನಕಲಿ ಮದ್ಯ ಹಾಗೂ ಮದ್ಯ ತಯಾರಿಕೆಗೆ ಬಳಸುವ 105 ಲೀ. ಮದ್ಯಸಾರ, 50 ಲೀ. ಮದ್ಯದ ಬ್ಲೆಂಡ್, ನಕಲಿ ಮುಚ್ಚಳಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳಾದ ಮಡಿವಾಳಪ್ಪ ಕೊಡಗಾನೂರ, ಲಕ್ಷ್ಮಣ ಜಾಲಾಪುರ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry