ಮುಖ್ಯ ಸುತ್ತಿಗೆ ಯೂಕಿ

7

ಮುಖ್ಯ ಸುತ್ತಿಗೆ ಯೂಕಿ

Published:
Updated:
ಮುಖ್ಯ ಸುತ್ತಿಗೆ ಯೂಕಿ

ಮಿಯಾಮಿ: ಭಾರತದ ಯೂಕಿ ಭಾಂಬ್ರಿ ಮಿಯಾಮಿ ಓಪನ್ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಬುಧವಾರ ಮುಖ್ಯ ಸುತ್ತು ಪ್ರವೇಶಿಸಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದ ಅರ್ಹತಾ ಸುತ್ತಿನ ಎರಡನೇ ಪಂದ್ಯದಲ್ಲಿ ಯೂಕಿ 7–5, 6–2ರಲ್ಲಿ ಸ್ವೀಡನ್‌ನ ಎಲಿಯಾಸ್‌ ಯೆಮರ್ ಅವರನ್ನು ಮಣಿಸಿದರು.

ಯೂಕಿ ಸತತವಾಗಿ ಎರಡನೇ ಎಟಿಪಿ ಟೂರ್ನಿಯಲ್ಲಿ ಮುಖ್ಯಸುತ್ತು ತಲುಪಿದ್ದಾರೆ. ಈಚೆಗೆ ನಡೆದ ಇಂಡಿಯಾನ ವೇಲ್ಸ್ ಮಾಸ್ಟರ್ಸ್‌ನಲ್ಲಿ ಲೂಕಾಸ್ ಪುಯಿಲ್ಲೆಗೆ ಸೋಲುಣಿಸಿದ್ದರು.

25 ವರ್ಷದ ಯೂಕಿ ಹಾಗೂ 133ನೇ ರ‍್ಯಾಂಕ್‌ನ ಆಟಗಾರ ಯೆಮರ್‌ ಎರಡನೇ ಪಂದ್ಯದಲ್ಲಿ ಮುಖಾಮುಖಿಯಾಗಿದ್ದಾರೆ. 2015ರಲ್ಲಿ ನಡೆದ ಆಪ್ಟಾಸ್‌ ಟೂರ್ನಿಯಲ್ಲಿ ಯೂಕಿ ಸೋತಿದ್ದರು.

ಮೊದಲ ಸುತ್ತಿನಲ್ಲಿ ಭಾರತದ ಆಟಗಾರ ಬೋಸ್ನಿಯಾದ 75ನೇ ರ‍್ಯಾಂಕ್‌ನ ಆಟಗಾರ ಮಿರ್ಜಾ ಬಾಸಿಕ್ ಅವರನ್ನು ಎದುರಿಸಲಿದ್ದಾರೆ. ಈ ಪಂದ್ಯ ಗೆದ್ದರೆ ಅಮೆರಿಕದ ಜಾಕ್‌ ಸ್ಯಾಕ್‌ ಎದುರು ಪೈಪೋಟಿ ನಡೆಸಲಿದ್ದಾರೆ.

ಭಾರತದ ರೋಹನ್‌ ಬೋಪಣ್ಣ ಪುರುಷರ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry