ರಜನಿ ಚಿತ್ರ ಬಿಡುಗಡೆ, ಅಮೀರ್‌ಗೆ ತಲೆನೋವು

7

ರಜನಿ ಚಿತ್ರ ಬಿಡುಗಡೆ, ಅಮೀರ್‌ಗೆ ತಲೆನೋವು

Published:
Updated:
ರಜನಿ ಚಿತ್ರ ಬಿಡುಗಡೆ, ಅಮೀರ್‌ಗೆ ತಲೆನೋವು

ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರ ಬಹುನಿರೀಕ್ಷಿತ ಚಿತ್ರ ‘2.0’ ಈ ವರ್ಷದ ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾಗಲಿದೆ. ಈ ಸುದ್ದಿಯಿಂದ ರಜನಿ ಅಭಿಮಾನಿಗಳಿಗೆ ಭಾರಿ ಖುಷಿಯಾಗಿದ್ದರೆ, ದೀಪಾವಳಿಗೆ ತಮ್ಮ ಚಿತ್ರವನ್ನು ಬಿಡುಗಡೆ ಮಾಡಬೇಕು ಎಂದು ನಿರ್ಧರಿಸಿದ್ದ ಇತರ ಚಿತ್ರ ನಿರ್ದೇಶಕರಿಗೆ ದೊಡ್ಡ ತಲೆನೋವಾಗಿದೆ. ಬಾಲಿವುಡ್‌ ನಟ ಅಮೀರ್‌ ಖಾನ್‌ ಕೂಡ ಚಿಂತೆ ಮಾಡುವಂತಾಗಿದೆ.

ಅಮೀರ್‌ ಸದ್ಯ ಆ್ಯಕ್ಷನ್‌ ಥ್ರಿಲ್ಲರ್‌ ಸಿನಿಮಾ ‘ಥಗ್ಸ್‌ ಆಫ್‌ ಹಿಂದುಸ್ತಾನ್‌’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾವನ್ನೂ ದೀಪಾವಳಿ ದಿನ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ರಜನಿ ಚಿತ್ರ ಎಂದ ಮೇಲೆ ಅಭಿಮಾನಿಗಳ ನಿರೀಕ್ಷೆ ಜೋರಾಗಿರುತ್ತದೆ. ಈಗ  ಚಿತ್ರ ಬಿಡುಗಡೆ ದಿನಾಂಕಗಳ ಸಂಘರ್ಷವನ್ನು ತಪ್ಪಿಸಲು ಯೋಚಿಸುತ್ತಿದೆ ಅಮೀರ್ ಸಿನಿಮಾದ ತಂಡ .

‘2.0’ ನಮ್ಮ ಸಿನಿಮಾ ಬಿಡುಗಡೆಯಂದೇ ಬಿಡುಗಡೆಯಾಗುತ್ತದೆ ಎಂದು ನನಗನಿಸುತ್ತಿಲ್ಲ. ರಜನಿಕಾಂತ್‌ ಅವರು ದೊಡ್ಡ ಸ್ಟಾರ್‌ ನಟ. ನಾನು ಅವರನ್ನು ತುಂಬಾ ಗೌರವಿಸುತ್ತೇನೆ’ ಎಂದು ಅಮೀರ್‌ ಹೇಳಿದ್ದಾರೆ.  ಬಹುಭಾಷೆಯ 2.0 ಚಿತ್ರದಲ್ಲಿ ನಟ ಅಕ್ಷಯ್‌ ಕುಮಾರ್‌ ಕೂಡ ನಟಿಸಿದ್ದು, ವಿಶೇಷವೆಂದರೆ ಅಕ್ಷಯ್‌ ಪಾತ್ರವನ್ನು ಮಾಡುವಂತೆ ಅಮೀರ್‌ ಅವರನ್ನು ಕೇಳಲಾಗಿತ್ತು. ಆದರೆ ಅವರು ನಿರಾಕರಿಸಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry