ಹಠಾತ್ ಅನಾರೋಗ್ಯ: ಶಿಮ್ಲಾದಿಂದ ದೆಹಲಿಗೆ ಮರಳಿದ ಸೋನಿಯಾ ಗಾಂಧಿ

7

ಹಠಾತ್ ಅನಾರೋಗ್ಯ: ಶಿಮ್ಲಾದಿಂದ ದೆಹಲಿಗೆ ಮರಳಿದ ಸೋನಿಯಾ ಗಾಂಧಿ

Published:
Updated:
ಹಠಾತ್ ಅನಾರೋಗ್ಯ: ಶಿಮ್ಲಾದಿಂದ ದೆಹಲಿಗೆ ಮರಳಿದ ಸೋನಿಯಾ ಗಾಂಧಿ

ಶಿಮ್ಲಾ: ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಹಠಾತ್ ಅನಾರೋಗ್ಯಕ್ಕೀಡಾಗಿದ್ದರಿಂದ ದೆಹಲಿಗೆ ವಾಪಸಾಗಿದ್ದಾರೆ.

ಇಲ್ಲಿನ ಛರಬ್ರಾದಲ್ಲಿ ನಿರ್ಮಾಣ ಹಂತದಲ್ಲಿರುವ ತಮ್ಮ ಮನೆಯನ್ನು ವೀಕ್ಷಿಸಲು ಮಗಳು ಪ್ರಿಯಾಂಕಾ ವಾದ್ರಾ ಜತೆ ಬಂದಿದ್ದ ಅವರು ಗುರುವಾರ ಮಧ್ಯರಾತ್ರಿ ಹಠಾತ್ ಅನಾರೋಗ್ಯಕ್ಕೀಡಾಗಿದ್ದಾರೆ.

ಅಂಬುಲೆನ್ಸ್‌ ಮತ್ತು ವೈದ್ಯರನ್ನು ಕಳುಹಿಸಿಕೊಡುವಂತೆ ತಮಗೆ ದೂರವಾಣಿ ಕರೆ ಬಂದಿತ್ತು ಎಂದು ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜಿನ ಡಾ. ರಮೇಶ್ ಚಾಂದ್ ತಿಳಿಸಿದ್ದಾರೆ.

ಆದರೆ, ಅಂಬುಲೆನ್ಸ್‌ ಕಳುಹಿಸಿದರೂ ತಮ್ಮದೇ ಕಾರಿನಲ್ಲಿ ಸೋನಿಯಾ ವಾಪಸಾಗಿದ್ದಾರೆ. ದಾರಿ ಮಧ್ಯೆ ಪಂಚಕುಲಾದಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದಿದ್ದಾರೆ. ನಂತರ ದೆಹಲಿಗೆ ತೆರಳಿದ್ದಾರೆ.

ಸೋನಿಯಾ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಚಂಡಿಗಡದವರೆಗೆ ಅವರ ಜತೆಗಿದ್ದ ಡಾ. ರಮೇಶ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry