ವೊಡಾಫೋನ್ ಉದ್ಯೋಗ ಕಾರ್ಯಕ್ರಮ

7

ವೊಡಾಫೋನ್ ಉದ್ಯೋಗ ಕಾರ್ಯಕ್ರಮ

Published:
Updated:
ವೊಡಾಫೋನ್ ಉದ್ಯೋಗ ಕಾರ್ಯಕ್ರಮ

ಬೆಂಗಳೂರು: ಮೊಬೈಲ್‌ ಸೇವಾ ಸಂಸ್ಥೆ ವೊಡಾಫೋನ್, ಅಂತರರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗಾವಕಾಶ ಕಲ್ಪಿಸುವ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.

2022ರ ವೇಳೆಗೆ ದೇಶದಲ್ಲಿ 50 ಲಕ್ಷ ಹಾಗೂ ವಿಶ್ವದಾದ್ಯಂತ 1 ಕೋಟಿ ಯುವ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ವಿಶಿಷ್ಟ ಯೋಜನೆ ಇದಾಗಿದೆ. ಇದಕ್ಕಾಗಿ ಪ್ರತ್ಯೇಕ ಆನ್‌ಲೈನ್‌ ವೇದಿಕೆ ಅಭಿವೃದ್ಧಿಪಡಿಸಿದೆ. ಇಲ್ಲಿ ಕೌಶಲ್ಯ, ವೃತ್ತಿ ಮಾರ್ಗದರ್ಶನ ಮತ್ತು ತರಬೇತಿ ಮಾಹಿತಿ ದೊರೆಯಲಿದೆ.

ಯುವ ಜನರು https://futurejobsfinder.vodafone.com ಅಂತರ್ಜಾಲ ತಾಣದಲ್ಲಿ ತಮ್ಮ ಕೌಶಲ್ಯಕ್ಕೆ ಸೂಕ್ತ ಉದ್ಯೋಗ ಅರಸಬಹುದು. ‘ಆನ್‍ಲೈನ್ ಡಿಜಿಟಲ್ ಕೌಶಲ ತರಬೇತಿಯನ್ನು ಈ ವೇದಿಕೆಯಲ್ಲಿ ಉಚಿತವಾಗಿ ಪಡೆಯಬಹುದು’ ಎಂದು ಸಂಸ್ಥೆಯ  ವ್ಯವಸ್ಥಾಪಕ ನಿರ್ದೇಶಕ ಸುನೀಲ್ ಸೂದ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry