ಡಿಸೆಂಬರ್‌ನಲ್ಲಿ ಮುಕೇಶ್‌ ಅಂಬಾನಿ ಪುತ್ರನ ಮದುವೆ

7

ಡಿಸೆಂಬರ್‌ನಲ್ಲಿ ಮುಕೇಶ್‌ ಅಂಬಾನಿ ಪುತ್ರನ ಮದುವೆ

Published:
Updated:
ಡಿಸೆಂಬರ್‌ನಲ್ಲಿ ಮುಕೇಶ್‌ ಅಂಬಾನಿ ಪುತ್ರನ ಮದುವೆ

ನವದೆಹಲಿ : ಉದ್ಯಮಿ ಮುಕೇಶ್ ಅಂಬಾನಿಯ ಹಿರಿಯ ಪುತ್ರ ಆಕಾಶ್ ಅವರು ವಜ್ರದ ವ್ಯಾಪಾರಿ ರಸೆಲ್‌ ಮೆಹ್ತಾ ಅವರ ಪುತ್ರಿ ಶ್ಲೋಕಾ ಮೆಹ್ತಾ ಅವರನ್ನು ಡಿಸೆಂಬರ್‌ನಲ್ಲಿ ವರಿಸಲಿದ್ದಾರೆ.

ಅಕಾಶ್ ಮತ್ತು ಶ್ಲೋಕಾ ಅವರು ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಷನಲ್‌ ಸ್ಕೂಲ್‌ನಲ್ಲಿ ಸಹಪಾಠಿಗಳಾಗಿದ್ದರು.

ಗೋವಾದ ಪಂಚತಾರಾ ಹೊಟೇಲ್‌ನಲ್ಲಿ ಶನಿವಾರ ಎರಡೂ ಕುಟುಂಬದವರು ನಿಶ್ಚಿತಾರ್ಥಕ್ಕೂ ಮುನ್ನ ಪೂರ್ವಭಾವಿ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಿಶ್ಚಿತಾರ್ಥ ಮತ್ತು ಮದುವೆ ಬಗ್ಗೆ ಕುಟುಂಬದವರಿಂದ ಅಧಿಕೃತ ಮಾಹಿತಿ ಬಂದಿಲ್ಲ.

ಮುಂಬೈನ ಒಬೆರಾಯ್‌ ಹೊಟೇಲ್‌ನಲ್ಲಿ ಡಿಸೆಂಬರ್‌ 8 ರಿಂದ 12ರವರೆಗೆ ನಾಲ್ಕರಿಂದ ಐದು ದಿನಗಳವರೆಗೆ ಮದುವೆ ಸಮಾರಂಭ ನಡೆಯುವ ಸಾಧ್ಯತೆ ಇದೆ.

ಈ ಮದುವೆ ಸುದ್ದಿಯ ಬಗ್ಗೆ ಎರಡೂ ಕುಟುಂಬಗಳಿಗೆ ಇ–ಮೇಲ್‌ ಮೂಲಕ ಪ್ರತಿಕ್ರಿಯೆ ಕೇಳಲಾಗಿತ್ತು. ಯಾವುದೇ ಉತ್ತರ ಬಂದಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಶನಿವಾರ ನಡೆದ ಕಾರ್ಯಕ್ರಮದ ಫೊಟೊ ಹರಿದಾಡುತ್ತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry