ಸ್ಥಳೀಯರಿಗೆ ಟಿಕೆಟ್ ನೀಡಲು ಒತ್ತಾಯ

7

ಸ್ಥಳೀಯರಿಗೆ ಟಿಕೆಟ್ ನೀಡಲು ಒತ್ತಾಯ

Published:
Updated:

ಬೆಂಗಳೂರು: ಮಹದೇವಪುರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್‌ ಪಕ್ಷವು ಸ್ಥಳೀಯವರಿಗೆ ಟಿಕೆಟ್ ನೀಡಬೇಕು ಎಂದು ಮೂಲ ಅನುಸೂಚಿತ ಜಾತಿಗಳ ಐಕ್ಯತಾ ಸಮಿತಿ ಒತ್ತಾಯಿಸಿದೆ.

ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಸ್ಥಾಪಕ ಪಟ್ಟಂದೂರು ಬಿ.ಕೃಷ್ಣಪ್ಪ, ‘ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷವು ಕ್ಷೇತ್ರದ ಹೊರಗಿನ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಆನೇಕಲ್‍ನ ಬಿ.ಶಿವಣ್ಣ 2008ರಲ್ಲಿ ಹಾಗೂ ಬ್ಯಾಟರಾಯನಪುರದ ಎ.ಸಿ.ಶ್ರೀನಿವಾಸ್‍ 2013ರಲ್ಲಿ ಇಲ್ಲಿಂದ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ಪಕ್ಷದ ಕೆಲ ಹಿರಿಯ ನಾಯಕರು ಈ ಬಾರಿಯೂ ಶ್ರೀನಿವಾಸ್‌ಗೆ ಟಿಕೆಟ್ ಕೊಡಿಸಲು ಯತ್ನಿಸುತ್ತಿದ್ದಾರೆ. ಇದಕ್ಕೆ ಹೈಕಮಾಂಡ್‌ ಸೊಪ್ಪು ಹಾಕಬಾರದು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry