ಹೊರೆಯಾದ ಕಚ್ಚಾ ತೈಲ ಆಮದು

7

ಹೊರೆಯಾದ ಕಚ್ಚಾ ತೈಲ ಆಮದು

Published:
Updated:
ಹೊರೆಯಾದ ಕಚ್ಚಾ ತೈಲ ಆಮದು

ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕಚ್ಚಾ ತೈಲ ಆಮದು ವೆಚ್ಚವು ಶೇ 25 ರಷ್ಟು ಏರಿಕೆ ಆಗುವ ಸಾಧ್ಯತೆ ಇದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಕಾಣುತ್ತಿದೆ. ಭಾರತ ತನ್ನ ದೇಶಿ ಬೇಡಿಕೆ ಪೂರೈಸಲು ಶೇ 80ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಇದರಿಂದ ಸಹಜವಾಗಿಯೇ ಆಮದು ಮೇಲಿನ ವೆಚ್ಚವೂ ಹೆಚ್ಚಾಗಲಿದೆ ಎಂದು ಪೆಟ್ರೋಲಿಯಂ ಸಚಿವಾಲಯದ ಯೋಜನೆ ಮತ್ತು ವಿಶ್ಲೇಷಣಾ (ಪಿಪಿಎಸಿ) ಘಟಕವು ತಿಳಿಸಿದೆ.

ಪ್ರಸಕ್ತ ಆರ್ಥಿಕ ವರ್ಷದ 11 ತಿಂಗಳಿನಲ್ಲಿ (2017ರ ಏಪ್ರಿಲ್‌ನಿಂದ 2018ರ ಫೆಬ್ರುವರಿ ಅವಧಿ) 19.50 ಕೋಟಿ ಟನ್‌ಗಳಷ್ಟು ತೈಲ ಆಮದು ಮಾಡಿಕೊಳ್ಳಲಾಗಿದೆ.

ಕಚ್ಚಾ ತೈಲ ಆಮದು ಮೌಲ್ಯ ಲೆಕ್ಕ ಹಾಕಲು ಪ್ರತಿ ಬ್ಯಾರೆಲ್‌ಗೆ 65 ಡಾಲರ್‌ ಮತ್ತು ಅಮೆರಿಕದ ಡಾಲರ್‌ಗೆ ವಿನಿಮಯ ದರ ₹ 65 ರಂತೆ ಪರಿಗಣಿಸಲಾಗಿದೆ ಎಂದು ಮಾಹಿತಿ ನೀಡಿದೆ.

ಕಚ್ಚಾ ತೈಲದ ಪ್ರತಿ ಬ್ಯಾರೆಲ್‌ ದರ 1 ಡಾಲರ್‌ನಷ್ಟು ಹೆಚ್ಚಾದಾಗ ಆಮದು ವೆಚ್ಚವು ಪ್ರತಿ ಬ್ಯಾರೆಲ್‌ಗೆ ₹ 823 ಕೋಟಿಗಳಷ್ಟು ಏರಿಕೆಯಾಗುತ್ತದೆ. ಅಂತೆಯೇ ಕರೆನ್ಸಿಯಲ್ಲಿ ಬದಲಾವಣೆ ಆದಾಗಲೂ ವ್ಯತ್ಯಾಸವಾಗುತ್ತದೆ.‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry