ಸ್ಪೇನ್ ತಂಡದಲ್ಲಿ ನಡಾಲ್‌ಗೆ ಸ್ಥಾನ

7

ಸ್ಪೇನ್ ತಂಡದಲ್ಲಿ ನಡಾಲ್‌ಗೆ ಸ್ಥಾನ

Published:
Updated:
ಸ್ಪೇನ್ ತಂಡದಲ್ಲಿ ನಡಾಲ್‌ಗೆ ಸ್ಥಾನ

ಮ್ಯಾಡ್ರಿಡ್‌: ಸ್ಪೇನ್‌ನ ಡೇವಿಸ್‌ ಕಪ್‌ ಟೆನಿಸ್‌ ತಂಡದಲ್ಲಿ ಅನುಭವಿ ಸಿಂಗಲ್ಸ್‌ ಆಟಗಾರ ರಫೆಲ್‌ ನಡಾಲ್‌ಗೆ ಅವಕಾಶ ನೀಡಲಾಗಿದೆ.

‘ಏಪ್ರಿಲ್‌ 6 ರಿಂದ 8ರವರೆಗೆ ನಡೆಯುವ ಜರ್ಮನಿ ವಿರುದ್ಧದ ಡೇವಿಸ್‌ ಕಪ್‌ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ನಡಾಲ್‌ ಆಡಲಿದ್ದಾರೆ’ ಎಂದು ನಾಯಕ ಸರ್ಜಿ ಬ್ರುಗುಯೆರಾ ತಿಳಿಸಿದ್ದಾರೆ.

ನಡಾಲ್‌ 2016ರಲ್ಲಿ ಕೊನೆಯ ಬಾರಿಗೆ ಸ್ಪೇನ್‌ ತಂಡದಲ್ಲಿ ಆಡಿದ್ದರು. ಗ್ರ್ಯಾನ್‌ಸ್ಲಾಮ್‌ನಲ್ಲಿ 16 ಪ್ರಶಸ್ತಿಗಳನ್ನು ಗೆದ್ದಿರುವ ನಡಾಲ್‌, ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿದ್ದಾರೆ.

‘ಗಾಯದ ಕಾರಣ ನಡಾಲ್‌ ಈ ವರ್ಷದ ಜನವರಿಯಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಓಪನ್‌ನಲ್ಲಿ ಆಡಿರಲಿಲ್ಲ. ಜೊತೆಗೆ ಇನ್ನು ಕೆಲ ಟೂರ್ನಿಗಳಿಂದಲೂ ಅವರು ಹಿಂದೆ ಸರಿದಿದ್ದರು. ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದು ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ’ ಎಂದು ಸರ್ಜಿ ಹೇಳಿದ್ದಾರೆ.

ಪ್ಯಾಬ್ಲೊ ಕರೆನೊ, ರಾಬರ್ಟೊ ಬಟಿಸ್ಟಾ, ಡೇವಿಡ್‌ ಫೆರರ್‌ ಮತ್ತು ಫೆಲಿಸಿಯಾನೊ ಲೊಪೆಜ್‌ ಅವರೂ ಸ್ಪೇನ್‌ ತಂಡದಲ್ಲಿದ್ದಾರೆ.

ಸ್ಪೇನ್‌ ತಂಡ ಜರ್ಮನಿ ವಿರುದ್ಧ ಗೆದ್ದರೆ, ಸೆಮಿಫೈನಲ್‌ನಲ್ಲಿ ಫ್ರಾನ್ಸ್‌ ಇಲ್ಲವೇ ಇಟಲಿ ಎದುರು ಆಡಬೇಕಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry