ಚೀನಾಗೆ ಕಿಮ್‌ ಜಾಂಗ್‌ ಉನ್‌ ರಹಸ್ಯ ಭೇಟಿ: ಅಣ್ವಸ್ತ್ರರಹಿತಗೊಳ್ಳಲು ಉತ್ತರ ಕೊರಿಯಾ ಸಿದ್ಧ?

7

ಚೀನಾಗೆ ಕಿಮ್‌ ಜಾಂಗ್‌ ಉನ್‌ ರಹಸ್ಯ ಭೇಟಿ: ಅಣ್ವಸ್ತ್ರರಹಿತಗೊಳ್ಳಲು ಉತ್ತರ ಕೊರಿಯಾ ಸಿದ್ಧ?

Published:
Updated:
ಚೀನಾಗೆ ಕಿಮ್‌ ಜಾಂಗ್‌ ಉನ್‌ ರಹಸ್ಯ ಭೇಟಿ: ಅಣ್ವಸ್ತ್ರರಹಿತಗೊಳ್ಳಲು ಉತ್ತರ ಕೊರಿಯಾ ಸಿದ್ಧ?

ಬೀಜಿಂಗ್‌: ಕೊರಿಯಾ ಪೆನಿನ್ಸುಲಾ ಅಣ್ವಸ್ತ್ರರಹಿತಗೊಳಿಸಲು ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ವಾಗ್ದಾನ ನೀಡಿರುವುದಾಗಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಬುಧವಾರ ಬಹಿರಂಗ ಪಡಿಸಿದರು.

ಕಳೆದ ಭಾನುವಾರದಿಂದ ಬುಧವಾರದವರೆಗೂ ಉತ್ತರ ಕೊರಿಯಾ ಅಧ್ಯಕ್ಷ ಚೀನಾ ಪ್ರವಾಸ ಕೈಗೊಂಡಿದ್ದನ್ನು ಉಭಯ ರಾಷ್ಟ್ರಗಳು ಸ್ಪಷ್ಟಪಡಿಸಿವೆ.

2011ರಲ್ಲಿ ಅಧಿಕಾರ ವಹಿಸಿದ ನಂತರ ಕಿಮ್‌ ಜಾಂಗ್ ಉನ್‌ ಕೈಗೊಂಡಿದ್ದ ಮೊದಲ ವಿದೇಶ ಪ್ರವಾಸ ಇದಾಗಿದೆ. ಮುಂಬರಲಿರುವ ದಕ್ಷಿಣ ಕೊರಿಯಾ ಮತ್ತು ಅಮೆರಿಕ ಜತೆಗಿನ ಸಭೆಗೆ ಪೂರ್ವ ತಯಾರಿಯಾಗಿ ಈ ಭೇಟಿ ನಡೆದಿರುವುದಾಗಿ ವಿಶ್ಲೇಷಿಸಲಾಗಿದೆ.

ಉತ್ತರ ಕೊರಿಯಾದ ಮಾಜಿ ಅಧ್ಯಕ್ಷ ದಿ.ಕಿಮ್‌ ಇಲ್‌ ಸಂಗ್‌ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿದ್ದ ದಿ.ಕಿಮ್‌ ಜಾಂಗ್‌ ಇನ್‌ ಅವರ ಇಚ್ಛೆಯಂತೆ ಕೊರಿಯಾ ಪೆನಿನ್ಸುಲಾವನ್ನು ಅಣ್ವಸ್ತ್ರರಹಿತಗೊಳಿಸಲು ಬದ್ಧನಾಗಿರುವುದಾಗಿ ಕಿಮ್‌ ಜಾಂಗ್‌ ಉನ್‌ ತಿಳಿಸಿರುವುದಾಗಿ ಚೀನಾದ ಸರ್ಕಾರಿ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.

ಆತಂಕದ ವಾತಾವರಣ ಶಮನಗೊಳಿಸಲು ಅಮೆರಿಕ ಮತ್ತು ದಕ್ಷಿಣ ಕೊರಿಯಾದೊಂದಿಗೆ ಶಾಂತಿ ಮಾತುಕತೆಗೆ ಸಿದ್ಧವಿರುವುದಾಗಿ ಹೇಳಿರುವುದಾಗಿ ವರದಿಯಾಗಿದೆ. ಆದರೆ, ಅಣ್ವಸ್ತ್ರರಹಿತಗೊಳಿಸುವ ಕ್ರಮ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜತೆಗಿನ ಭೇಟಿ ಸಂಬಂಧ ಉತ್ತರ ಕೊರಿಯಾದ ಕೆಸಿಎನ್‌ಎ ಸುದ್ದಿ ಸಂಸ್ಥೆ ಯಾವುದೇ ಪ್ರಸ್ತಾಪ ಮಾಡಿಲ್ಲ.

(ಕಿಮ್ ಪತ್ನಿ ರಿ ಸೋಲ್‌ ಜು ಅವರನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಪತ್ನಿ ಪೆಂಗ್‌ ಲಿಯಾನ್‌ ಬರ ಮಾಡಿಕೊಂಡರು. ಚಿತ್ರ–ಹಿಂದುಸ್ತಾನ್‌ ಟೈಮ್ಸ್‌)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry