ಆಸ್ಟ್ರೇಲಿಯಾ ಜಯಭೇರಿ

7
ಮಹಿಳಾ ಟ್ವೆಂಟಿ–20 ತ್ರಿಕೋನ ಕ್ರಿಕೆಟ್‌ ಸರಣಿ: ಇಂಗ್ಲೆಂಡ್‌ಗೆ ನಿರಾಸೆ

ಆಸ್ಟ್ರೇಲಿಯಾ ಜಯಭೇರಿ

Published:
Updated:
ಆಸ್ಟ್ರೇಲಿಯಾ ಜಯಭೇರಿ

ಮುಂಬೈ: ಡೆಲಿಸಾ ಕಿಮ್ಮಿನ್ಸ್‌ (20ಕ್ಕೆ3) ಮತ್ತು ಮೇಗನ್‌ ಶೂಟ್‌ (13ಕ್ಕೆ2) ಅವರ ಪರಿಣಾಮಕಾರಿ ಬೌಲಿಂಗ್‌ ಬಲದಿಂದ ಆಸ್ಟ್ರೇಲಿಯಾ ಮಹಿಳಾ ತಂಡ ತ್ರಿಕೋನ ಟ್ವೆಂಟಿ–20 ಕ್ರಿಕೆಟ್‌ ಸರಣಿಯ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಇಂಗ್ಲೆಂಡ್‌ ತಂಡವನ್ನು ಸೋಲಿಸಿದೆ.

ಬ್ರೆಬೊರ್ನ್‌ ಕ್ರೀಡಾಂಗಣದಲ್ಲಿ ಬುಧವಾರ ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ 17.4 ಓವರ್‌ಗಳಲ್ಲಿ 96ರನ್‌ಗಳಿಗೆ ಆಲೌಟ್‌ ಆಯಿತು. ಸುಲಭ ಗುರಿಯನ್ನು ಆಸ್ಟ್ರೇಲಿಯಾ 11.3 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಬ್ಯಾಟಿಂಗ್‌ ಆರಂಭಿಸಿದ ಇಂಗ್ಲೆಂಡ್‌ ತಂಡಕ್ಕೆ ಮೊದಲ ಓವರ್‌ನಲ್ಲಿ ಆಘಾತ ಎದುರಾಯಿತು. ಜೆಸ್‌ ಜೊನಾಸನ್‌ ಹಾಕಿದ ನಾಲ್ಕನೇ ಎಸೆತದಲ್ಲಿ ಡ್ಯಾನಿಯಲ್‌ ವೈಟ್‌ (6) ಔಟಾದರು. ಇದರ ಬೆನ್ನಲ್ಲೇ ಟಾಮಿ ಬೆಮಾಂಟ್ (17; 12ಎ, 3ಬೌಂ) ಮತ್ತು ಆ್ಯಮಿ ಎಲೆನ್‌ ಜೋನ್ಸ್‌ (4) ಪೆವಿಲಿಯನ್‌ ಸೇರಿದರು. ನಂತರ ತಂಡ ಕುಸಿತದ ಹಾದಿ ಹಿಡಿಯಿತು. ನಾಯಕಿ ಹೀಥರ್‌ ನೈಟ್‌ ಶೂನ್ಯಕ್ಕೆ ಔಟಾದರು. ನಥಾಲಿ ಶೀವರ್‌ (10) ಮತ್ತು ಫ್ರಾನ್‌ ವಿಲ್ಸನ್‌ (11) ಅವರೂ ವಿಫಲರಾದರು. ಅಲೈಸ್‌ ಡೇವಿಡ್‌ಸನ್‌ ರಿಚರ್ಡ್ಸ್‌ (24; 24ಎ, 2ಬೌಂ) ತಾಳ್ಮೆಯ ಆಟ ಆಡಿ ತಂಡ 90ರ ಗಡಿ ಮುಟ್ಟುವಂತೆ ನೋಡಿಕೊಂಡರು.

ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 12ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡಿತ್ತು. ಅಲಿಸಾ ಹೀಲಿ (6) ಮತ್ತು ಎಲಿಸ್ ವಿಲಾನಿ (1)ಬೇಗನೆ ಪೆವಿಲಿಯನ್‌ ಸೇರಿದರು. ಎಲಿಸೆ ಪೆರಿ (ಔಟಾಗದೆ 47; 32ಎ, 9ಬೌಂ) ಮತ್ತು ನಾಯಕಿ ಮೆಗ್‌ ಲ್ಯಾನಿಂಗ್‌ (ಔಟಾಗದೆ 41; 28ಎ, 8ಬೌಂ) ಮಿಂಚಿನ ಆಟ ಆಡಿ ತಂಡವನ್ನು ಜಯದ ದಡ ಮುಟ್ಟಿಸಿದರು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌, 17.4 ಓವರ್‌ಗಳಲ್ಲಿ 96 (ಡ್ಯಾನಿಯಲ್‌ ವೈಟ್‌ 6, ಟಾಮಿ ಬೆಮಾಂಟ್ 17, ನಥಾಲಿ ಶೀವರ್‌ 10, ಫ್ರಾನ್‌ ವಿಲ್ಸನ್‌ 11, ಅಲೈಸ್‌ ಡೇವಿಡ್‌ಸನ್‌ ರಿಚರ್ಡ್ಸ್‌ 24, ಜೆನ್ನಿ ಗನ್‌ 12; ಜೆಸ್‌ ಜೊನಾಸೆನ್‌ 21ಕ್ಕೆ2, ಮೇಗನ್‌ ಶೂಟ್‌ 13ಕ್ಕೆ2, ಎಲಿಸೆ ಪೆರಿ 25ಕ್ಕೆ1, ಡೆಲಿಸಾ ಕಿಮ್ಮಿನ್ಸ್‌ 20ಕ್ಕೆ3, ಅಮಂಡಾ ವೆಲಿಂಗ್ಟನ್‌ 2ಕ್ಕೆ1, ಆ್ಯಷ್ಲೆಗ್‌ ಗಾರ್ಡನರ್‌ 4ಕ್ಕೆ1).

ಆಸ್ಟ್ರೇಲಿಯಾ: 11.3 ಓವರ್‌ಗಳಲ್ಲಿ 2 ವಿಕೆಟ್‌ಗೆ 97 (ಅಲಿಸ ಹೀಲಿ 6, ಎಲಿಸೆ ಪೆರಿ ಔಟಾಗದೆ 47, ಮೆಗ್‌ ಲ್ಯಾನಿಂಗ್‌ ಔಟಾಗದೆ 41; ನಥಾಲಿ ಶೀವರ್‌ 9ಕ್ಕೆ1, ಸೋಫಿ ಎಕ್ಸಲೆಸ್ಟೋನ್‌ 15ಕ್ಕೆ1).

ಫಲಿತಾಂಶ: ಆಸ್ಟ್ರೇಲಿಯಾಕ್ಕೆ 8 ವಿಕೆಟ್‌ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry