6

ಇಂದಿರಾ ಕ್ಯಾಂಟೀನ್‌ಗೆ ಭೂಮಿಪೂಜೆ

Published:
Updated:
ಇಂದಿರಾ ಕ್ಯಾಂಟೀನ್‌ಗೆ ಭೂಮಿಪೂಜೆ

ಬಸವನಬಾಗೇವಾಡಿ: ‘ಅಭಿವೃದ್ಧಿ ಕಾರ್ಯಗಳ ಮೂಲಕ ಜನರ ಮನಸ್ಸನ್ನು ಗೆಲ್ಲಬೇಕು ಎಂದುಕೊಂಡಿರುವ ನಾನು ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ’ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.

ಪಟ್ಟಣದಲ್ಲಿ ಈಚೆಗೆ ಇಂದಿರಾ ಕ್ಯಾಂಟೀನ್‌ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ಸೇರಿದಂತೆ ವಿವಿಧ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿದ ನಂತರ ಡಾ.ಬಿ.ಆರ್‌.ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾನು ಜಾತ್ರೆ ಮಾಡಲು ಬಂದಿದ್ದೇನೆ ಎಂದು ಮಾಜಿ ಸಚಿವರೊಬ್ಬರು ಹೇಳುತ್ತಿದ್ದಾರೆ. ಜಾತ್ರೆ ಮಾಡಲು ಬಂದವರು ಮನಗೂಳಿ–ಬಿಜ್ಜಳ, ಬೀಳಗಿ–ಬಾರಕೇಡ್‌ ರಾಜ್ಯ ಹೆದ್ದಾರಿ, ಮೆಗಾ ಮಾರುಕಟ್ಟೆ, ಹೊಸ ಕಾಲೇಜುಗಳ ಮಂಜೂರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿರಲಿಲ್ಲ. ನಾನು ಮಾಡಿದ ಕಾರ್ಯಗಳನ್ನು ಕ್ಷೇತ್ರದ ಜನರು ನೋಡುತ್ತಿದ್ದಾರೆ. ಅವರ ಮೆಚ್ಚುಗೆಯೇ ನನಗೆ ಶ್ರೀರಕ್ಷೆ’ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಈರಣ್ಣ ಪಟ್ಟಣಶೆಟ್ಟಿ. ಡಿಎಸ್ಎಸ್ ಮುಖಂಡ ಸುರೇಶ ಮಣೂರ ಮಾತನಾಡಿದರು. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮುತ್ತು ಉಕ್ಕಲಿ. ಸದಸ್ಯರಾದ ಮುದಕು ಬಸರಕೋಡ. ಮುರಗೇಶ ನಾಯ್ಕೋಡಿ, ಮುಖಂಡರಾದ ಶಂಕರಗೌಡ ಬಿರಾದಾರ, ಸಂಗಮೇಶ ಓಲೇಕಾರ, ಉಮೇಶ ಹಾರಿವಾಳ, ನಿಸಾರ ಚೌಧರಿ. ಅಶೋಕ ಕರೆಕಲ್ಲ. ಜಿ.ಎಸ್ ಪಾಟೀಲ, ಸಾಯಬಲಾಲ ನದಾಫ್ ಇದ್ದರು.

ಕಾಂಗ್ರೆಸ್‌ ಬ್ಲಾಕ್‌ ಘಟಕದ ಪ್ರಧಾನ ಕಾರ್ಯದರ್ಶಿ ರವಿ ರಾಠೋಡ ಸ್ವಾಗತಿಸಿದರು, ಎಚ್.ಬಿ.ಬಾರಿಕಾಯಿ ವಂದಿಸಿದರು.

ಉಕ್ಕಲಿ ವರದಿ: ತಾಲ್ಲೂಕಿನ ಉಕ್ಕಲಿ ಗ್ರಾಮದಲ್ಲಿ ₹ 11 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಸಕ ಶಿವಾನಂದ ಪಾಟೀಲ ಮಾತನಾಡಿದರು. ಯರನಾಳದ ವಿರಕ್ತಮಠದ ಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖಂಡ ಅಣ್ಣಾಸಾಹೇಬಗೌಡ ಪಾಟೀಲ ಮಾತನಾಡಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುರೇಶ ಇಟ್ಟಂಗಿಹಾಳ ಅಧ್ಯಕ್ಷತೆ ವಹಿಸಿದ್ದರು.

ತಾಲ್ಲೂಕು ಪಂಚಾಯ್ತಿ ಸದಸ್ಯ ಸುಭಾಷ್ ಕಲ್ಯಾಣಿ, ಬಾಳಾಸಾಹೇಬಗೌಡ ಮಸಳಿ, ಪಿಕೆಪಿಎಸ್ ಅಧ್ಯಕ್ಷ ಅಪ್ಪಾಸಾಹೇಬ ಇಂಡಿ, ಚಂದ್ರಶೇಖರಗೌಡ ಪಾಟೀಲ, ಬಸವರಾಜ ಸೋಮಪುರ, ರಾಜುಗೌಡ ಪಾಟೀಲ (ಮಸಬಿನಾಳ), ಬಸಪ್ಪ ಹಣಮಶೆಟ್ಟಿ, ಶಂಕರಗೌಡ ಪಾಟೀಲ, ನಾನಾಸಾಹೇಬ ಪಾಟೀಲ, ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾನಂದ ಮಂಗಾನವರ, ಶಾರಾದಾ ಬೊಮ್ಮನಹಳ್ಳಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry