₹60 ಲಕ್ಷ ಮೌಲ್ಯದ ಮರಳು ವಶ

7

₹60 ಲಕ್ಷ ಮೌಲ್ಯದ ಮರಳು ವಶ

Published:
Updated:
₹60 ಲಕ್ಷ ಮೌಲ್ಯದ ಮರಳು ವಶ

ಬಂಟ್ವಾಳ: ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬಡಗ ಬೆಳ್ಳೂರು ಬಳಿ ಫಲ್ಗುಣಿ ನದಿಯಲ್ಲಿ ನಾಡ ದೋಣಿಯಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದಾಗ ಪೊಲೀಸರು ದಾಳಿ ಬುಧವಾರ ನಡೆಸಿ 48 ಬೋಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಮಾಹಿತಿ ಪಡೆದ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿದಾಗ ಮರಳು ತೆಗೆಯುತ್ತಿರುವವರು ಪರಾರಿಯಾದರು.

ಕಂದಾಯ ಮತ್ತು ಭೂವಿಜ್ಞಾನ ಅಧಿಕಾರಿಗಳೊಂದಿಗೆ ಪೊಲೀಸರು ಪರಿಶೀಲಿಸಿದಾಗ ಮರಳು ತುಂಬಿದ್ದ ಒಟ್ಟು 48 ಬೋಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಮರಳಿನ ಮೌಲ್ಯ ₹60ಲಕ್ಷ ಎಂದು ಭೂವಿಜ್ಞಾನ ಅಧಿಕಾರಿಗಳು ತಿಳಿಸಿದ್ದಾರೆ.

ಸಬ್ ಇನ್‌ಸ್ಪೆಕ್ಟರ್ ಹುದ್ದೆಯಲ್ಲಿರುವ ಪ್ರೊಬೆನಷರಿ ಐಪಿಎಸ್‌ ಅಕ್ಷಯ್ ಹಾಕೆ ನೇತೃತ್ವದಲ್ಲಿ ಪಿಎಸ್‌ಐ ಪ್ರಸನ್ನ, ಸಿಬ್ಬಂದಿಗಳಾದ ಪಿ.ಸಿ.ಬಸವರಾಜ್, ಹೆಡ್ ಕಾನ್ಸ್‌ಟೆಬಲ್‌ ಸಿ.ಕಿರಣ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry