ಕಡವೆ ಬೇಟೆ: ಆರು ಮಂದಿ ಬಂಧನ

7

ಕಡವೆ ಬೇಟೆ: ಆರು ಮಂದಿ ಬಂಧನ

Published:
Updated:

ಸೋಮವಾರಪೇಟೆ (ಕೊಡಗು ಜಿಲ್ಲೆ): ತಾಲ್ಲೂಕಿನ ಪುಷ್ಪಗಿರಿ ವನ್ಯಧಾಮದಲ್ಲಿ ಕಡವೆ ಹಾಗೂ ಅಪರೂಪದ ಕಾಡುಪ್ರಾಣಿಗಳನ್ನು ಬೇಟೆಯಾಡುತ್ತಿದ್ದ 6 ಮಂದಿ ಆರೋಪಿಗಳನ್ನು ಗುರುವಾರ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.

ಕುಂಬಾರಗಡಿಗೆ ಗ್ರಾಮದ ಟಿ.ಪಿ. ಮುದ್ದಯ್ಯ, ಸೋಮಯ್ಯ, ಗಣೇಶ, ಲೋಕೇಶ್, ಮುಟ್ಲು ಗ್ರಾಮದ ವಿ.ಕೆ. ಮನು, ಕಾಶಿ ಬಂಧಿತರು. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.ಬಂಧಿತರಿಂದ ಕಡವೆ, ಮುಳ್ಳುಹಂದಿ, ಮಂಗ ಸೇರಿದಂತೆ ವಿವಿಧ ಪ್ರಾಣಿಗಳ 40 ಕೆ.ಜಿ ಮಾಂಸ, ಒಂಟಿ ನಳಿಕೆಯ ಮೂರು ಕೋವಿ, ಆರು ಮೊಬೈಲ್‌, 9 ಕತ್ತಿ ಹಾಗೂ ಟಾರ್ಚ್‌ ವಶಕ್ಕೆ ಪಡೆಯಲಾಗಿದೆ. ಅಕ್ರಮ ಬೇಟೆ ಹಾಗೂ ಶಸ್ತ್ರಾಸ್ತ್ರ ಕಾಯಿದೆ ಉಲ್ಲಂಘನೆ ಅಡಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry