ಡ್ರೋನ್‌ ರ‍್ಯಾಂಪ್‌ ಷೋ

7

ಡ್ರೋನ್‌ ರ‍್ಯಾಂಪ್‌ ಷೋ

Published:
Updated:
ಡ್ರೋನ್‌ ರ‍್ಯಾಂಪ್‌ ಷೋ

ಫ್ಯಾಷನ್‌ ಶೋಗಳೆಂದರೆ ತಳುಕು, ಬಳುಕಿನ ರೂಪದರ್ಶಿಗಳು, ವೈಯಾರದ ನಡುಗೆ ಎಂದೇ ಜನಜನಿತ.

ಆದರೆ ಈ ಫ್ಯಾಷನ್‌ ಶೋ ಸಿದ್ಧ ಸೂತ್ರಗಳಿಗೆ ಮೀರಿದ್ದು. ಇಲ್ಲಿ ಸುಂದರ, ಸುಂದರಿಯರಿರಲಿಲ್ಲ. ಕಣ್ಸೆಳೆಯುವ ಉಡುಪುಗಳಿರಲಿಲ್ಲ. ಬದಲಾಗಿ ಇತ್ತೀಚಿನ ಕೆಲ ವರ್ಷಗಳಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಸುದ್ದಿ ಮಾಡಿರುವ ಡ್ರೋನ್‌ಗಳು ಡ್ರೋನ್‌ಗಳು ಡಿ ಅಂಡ್‌ ಜಿ ಕಂಪನಿಯ ಬ್ಯಾಗ್‌ ಹೊತ್ತುಕೊಂಡು ವೇದಿಕೆ ಏರಿದವು.

ಈ ಹೊಸ ಬಗೆಯ ಫ್ಯಾಷನ್‌ ಶೋ ನಡೆದಿದ್ದು ಇಟಲಿಯ ಮಿಯಾನ್‌ನಲ್ಲಿ. ವೈಫೈ ಸಂಪರ್ಕವಿಲ್ಲದ ಕಾರಣ ಮುಕ್ಕಾಲು ಗಂಟೆ ತಡವಾಗಿ ಪ್ರಾರಂಭವಾಯಿತು. ಆದರೆ ಹೊಸ ಪ್ರಯತ್ನವನ್ನು ನೋಡಲು ಪ್ರೇಕ್ಷಕರು ಬಹು ಸಂಖ್ಯೆಯಲ್ಲಿ ಕಾಯುತ್ತಿದ್ದರು. ಒಂದಾದರೊಂದರಂತೆ ಡ್ರೋನ್‌ಗಳು ಬ್ಯಾಗ್‌ ತರುತ್ತಿದ್ದರೆ ವೇದಿಕೆ ಎದುರಿಗಿದ್ದವರು ಬೆರಗಿನಿಂದ ನೋಡುತ್ತಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry