‘ಹನುಮ ಜಯಂತಿ’ ಶುಭ ಕೋರಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ವ್ಯಂಗ್ಯ

7
ಹಬ್ಬಗಳ ಆಚರಣೆಗೆ ಸರ್ಕಾರದಿಂದ ನೂರು ತೊಡಕು: ಕಾಂಗ್ರೆಸ್‌ ವಿರುದ್ಧ ಬಿಜೆಪಿ ವಾಗ್ದಾಳಿ

‘ಹನುಮ ಜಯಂತಿ’ ಶುಭ ಕೋರಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ವ್ಯಂಗ್ಯ

Published:
Updated:
‘ಹನುಮ ಜಯಂತಿ’ ಶುಭ ಕೋರಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ವ್ಯಂಗ್ಯ

ಬೆಂಗಳೂರು: ಹನುಮ ಜಯಂತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟರ್‌ನಲ್ಲಿ ಶುಭಾಶಯ ಕೋರಿರುವುದನ್ನು ಪ್ರಸ್ತಾಪಿಸಿರುವ ಬಿಜೆಪಿ ಸಂಸದರಾದ ಪ್ರಹ್ಲಾದ್ ಜೋಶಿ ಮತ್ತು ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದ್ದಾರೆ.

*

‘ನಾಡಿನ ಸಮಸ್ತ ಜನತೆಗೆ ಹನುಮ‌ ಜಯಂತಿಯ ಶುಭಾಶಯಗಳು. ಶ್ರದ್ಧೆ, ಭಕ್ತಿ ಹಾಗೂ ಧೈರ್ಯದ ಸಂಕೇತವಾದ ಹನುಮ ಜಯಂತಿಯಂದು ನಾಡಿನಲ್ಲಿ ಸದಾಕಾಲ ಸಮೃದ್ಧಿ ಹಾಗೂ ಸಂತಸ ತುಂಬಿರಲಿ, ಭಗವಂತನ ಆಶೀರ್ವಾದ ನಾಡಿನ ಎಲ್ಲ ಜನರ ಮೇಲಿರಲಿ ಎಂದು ಹಾರೈಸುತ್ತೇನೆ’ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಟ್ವಿಟರ್‌ನಲ್ಲೇ ಪ್ರತಿಕ್ರಿಯಿಸಿರುವ ಪ್ರಹ್ಲಾದ್ ಜೋಶಿ, ‘2018ರ ಚುನಾವಣೆ ಬ್ರೇಕಿಂಗ್, ರಾಮಾಯಣ ನಡೆದಿದೆಯಾ ಎಂದು ಪ್ರಶ್ನಿಸಿದವರಿಂದಲೂ ಹನುಮಾನ್ ಜಪ, ರಾಹುಲ್ ಗಾಂಧಿ ಹಾದಿ ತುಳಿದ ಸಿದ್ದರಾಮಯ್ಯ’ ಎಂದು ‘ಎಲೆಕ್ಷನ್ ಹಿಂದು ಅಟ್ ರಾಹುಲ್‌ಗಾಂಧಿ’ ಹ್ಯಾಷ್‌ಟ್ಯಾಗ್‌ ಅಡಿಯಲ್ಲಿ ಕಟಕಿಯಾಡಿದ್ದಾರೆ.

‘ಹನುಮ ಜಯಂತಿ ಆಚರಣೆಯಲ್ಲಿ ಭಾಗವಹಿಸಲು ಸಂಸದರಿಗೆ ಅಡ್ಡಿಪಡಿಸಿದ ಕಾಂಗ್ರೆಸ್ ಪಕ್ಷದಿಂದ ಹನುಮಾನ್ ಜಪ. ಧನ್ಯವಾದಗಳು ಕರ್ನಾಟಕ ಚುನಾವಣೆಗೆ’ ಎಂದೂ ಕೆಣಕಿದ್ದಾರೆ.

‘ಸಿದ್ದರಾಮಯ್ಯ ಅವರದ್ದು ಮುಖವಾಡದ ರಾಜಕೀಯ. ಚುನಾವಣೆ ಬಂದಾಗ ಹನುಮ, ರಾಮ ಎಲ್ಲ ನೆನಪಾಗುತ್ತಾರೆ. ಕಳೆದ ವರ್ಷದ ಹನುಮ ಜಯಂತಿ ಕಾರ್ಯಕ್ರಮದಲ್ಲಿ ನಮ್ಮ ಸಂಸದರು ಭಾಗವಹಿಸಲು ಇದೇ ಸಿದ್ದರಾಮಯ್ಯ ಅಡ್ಡಿಪಡಿಸಿದ್ದರು. ಈಗ ಮಠ–ಮಂದಿರಗಳಿಗೆ ಭೇಟಿ ಕೊಟ್ಟು ಹಿಂದೂಗಳ ಮತ ಸೆಳೆಯಲು ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಶೋಭಾ ಕರಂದ್ಲಾಜೆ ಮಾಧ್ಯಮಗೋಷ್ಠಿಯಲ್ಲಿ ದೂರಿದ್ದಾರೆ.

ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿರುವ ರಾಜ್ಯಸಭೆ ಸದಸ್ಯ ಜಿ.ಸಿ. ಚಂದ್ರಶೇಖರ, ‘ಬಿಜೆಪಿ ಕೇಳಿ‌ ನಾವು ಹನುಮ ಜಯಂತಿಗೆ ಶುಭ ಕೋರಬೇಕಾ, ಬಿಜೆಪಿಯವರು ಡೋಂಗಿ ಭಕ್ತರು. ನಾವು ಯಾವುದೇ ಜಯಂತಿಗೆ ಅಡ್ಡಿಪಡಿಸಿದವರಲ್ಲ. ನಿಜವಾದ ದೈವಭಕ್ತರು ಕಾಂಗ್ರೆಸ್‌ನವರೇ, ಬಿಜೆಪಿಯಿಂದ ಪಾಠ ಕಲಿಯಬೇಕಿಲ್ಲ’ ಎಂದು ತಿರುಗೇಟು ನೀಡಿದ್ದಾರೆ.

*

*

*

*

*

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry