ಹಾಕಿ : ಪ್ರಧಾನ್‌ ಸೋಮಣ್ಣ, ಸೋಮಯ್ಯ ಹ್ಯಾಟ್ರಿಕ್‌ ಗೋಲು

7

ಹಾಕಿ : ಪ್ರಧಾನ್‌ ಸೋಮಣ್ಣ, ಸೋಮಯ್ಯ ಹ್ಯಾಟ್ರಿಕ್‌ ಗೋಲು

Published:
Updated:

ಬೆಂಗಳೂರು: ಪ್ರಧಾನ್ ಸೋಮಣ್ಣ ಹಾಗೂ ಕೆ.ಪಿ ಸೋಮಯ್ಯ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಕೆನರಾ ಬ್ಯಾಂಕ್ ತಂಡ ಇಲ್ಲಿ ನಡೆಯುತ್ತಿರುವ 4ನೇ ಆವೃತ್ತಿಯ ಹಾಕಿ ಕರ್ನಾಟಕ ಲೀಗ್ ಪಂದ್ಯದಲ್ಲಿ ಶನಿವಾರ ಜಯದಾಖಲಿಸಿದೆ.

ಕೆನರಾ ಬ್ಯಾಂಕ್ ತಂಡ 7–3 ಗೋಲುಗಳಿಂದ ಡಿವೈಇಎಸ್‌ ‘ಬಿ’ ತಂಡಕ್ಕೆ ಸೋಲುಣಿಸಿದೆ. ವಿಜಯೀ ತಂಡದ ಇಬ್ಬರು ಆಟಗಾರರು ಹ್ಯಾಟ್ರಿಕ್‌ ಗೋಲಿನ ಸಾಧನೆ ಮಾಡಿದ್ದಾರೆ. ಪ್ರಧಾನ್‌ (11, 12, 32ನೇ ನಿ.) ಗೋಲು ದಾಖಲಿಸಿದರೆ, ಸೋಮಯ್ಯ (41, 49, 54ನೇ ನಿ.) ಚೆಂಡನ್ನು ಗುರಿ ಸೇರಿಸಿದರು. ಈ ತಂಡದ ಬಿ.ಸುನಿಲ್‌ (61ನೇ ನಿ.) ಅಂತಿಮ ಗೋಲು ಗಳಿಸಿದರು.

ಡಿವೈಇಎಸ್ ತಂಡದ ಪ್ರಜ್ವಲ್‌ (57ನೇ ನಿ.) ಹಾಗೂ ಮೋನಪ್ಪ (67, 70ನೇ ನಿ.) ಗೋಲು ದಾಖಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry