ಬೆಳ್ಳಿ ಗೆದ್ದ ಮಹಿಳೆಯರ ತಂಡ

7

ಬೆಳ್ಳಿ ಗೆದ್ದ ಮಹಿಳೆಯರ ತಂಡ

Published:
Updated:
ಬೆಳ್ಳಿ ಗೆದ್ದ ಮಹಿಳೆಯರ ತಂಡ

ಬೆಂಗಳೂರು: ಕರ್ನಾಟಕ ಮಹಿಳೆಯರ ತಂಡವು ಹರಿಯಾಣದಲ್ಲಿ ನಡೆದ 35ನೇ ಸೀನಿಯರ್ ರಾಷ್ಟ್ರೀಯ ನೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿತು. ಪುರುಷರ ತಂಡ ಕಂಚಿನ ಪದಕ ಪಡೆಯಿತು.

ಫೈನಲ್‌ ಪಂದ್ಯದಲ್ಲಿ ಮಹಿಳೆಯರ ತಂಡ 31–35ರಲ್ಲಿ ಹರಿಯಾಣದ ಎದುರು ನಿರಾಸೆ ಅನುಭವಿಸಿತು. ಸೆಮಿಫೈನಲ್‌ನಲ್ಲಿ ಈ ತಂಡ 28–9ರಲ್ಲಿ ಪಶ್ಚಿಮ ಬಂಗಾಳ ಎದುರು ಗೆದ್ದು ಫೈನಲ್‌ ಪ್ರವೇಶಿಸಿತ್ತು.

ಪುರುಷರ ತಂಡ ಸೆಮಿಫೈನಲ್‌ನಲ್ಲಿ 19–31ರಲ್ಲಿ ಹರಿಯಾಣ ವಿರುದ್ಧ ಸೋತಿದೆ. ಆದರೆ ಕ್ವಾರ್ಟರ್‌ಫೈನಲ್‌ನಲ್ಲಿ 32–30ರಲ್ಲಿ ದೆಹಲಿ ತಂಡಕ್ಕೆ ಸೋಲುಣಿಸಿತ್ತು.

ಕರ್ನಾಟಕದ ಪುರುಷ ಮತ್ತು ಮಹಿಳೆಯರ ತಂಡಗಳು ಚಂಡೀಗಡದಲ್ಲಿ ನಡೆಯುವ ಫೆಡರೇಷನ್‌ ಕಪ್‌ನಲ್ಲಿ ಆಡುವ ಅರ್ಹತೆ ಪಡೆದುಕೊಂಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry