ಪಂಚಪೀಠಗಳು ಯಾವುದೇ ಪಕ್ಷ, ವ್ಯಕ್ತಿ ಪರವಾಗಿಲ್ಲ: ರಂಭಾಪುರಿ ಶ್ರೀ

7

ಪಂಚಪೀಠಗಳು ಯಾವುದೇ ಪಕ್ಷ, ವ್ಯಕ್ತಿ ಪರವಾಗಿಲ್ಲ: ರಂಭಾಪುರಿ ಶ್ರೀ

Published:
Updated:
ಪಂಚಪೀಠಗಳು ಯಾವುದೇ ಪಕ್ಷ, ವ್ಯಕ್ತಿ ಪರವಾಗಿಲ್ಲ: ರಂಭಾಪುರಿ ಶ್ರೀ

ಬಾಳೆಹೊನ್ನೂರು: ವೀರಶೈವ ಧರ್ಮದ ಪಂಚಪೀಠಗಳು ರಾಜಕೀಯ ವಲಯದಿಂದ ಬಹುದೂರ ಇವೆ ಎಂದು ರಂಭಾಪುರಿ ಪೀಠದ ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಹೇಳಿದರು. ‘ರಂಭಾಪುರಿ ಬೆಳಗು’ ಮಾಸಪತ್ರಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕೆಲವರು ಆಧುನಿಕತೆ ಮತ್ತು ವೈಚಾರಿಕತೆ ಹೆಸರಿನಲ್ಲಿ ಧರ್ಮ, ಸಂಸ್ಕೃತಿಗೆ ಧಕ್ಕೆ ತರುವ ಕೆಲಸ ಮಾಡುತ್ತಿರುವುದು ದುರ್ದೈವದ ಸಂಗತಿ. ಸಂಸ್ಕೃತಿ ಸೌಹಾರ್ದ ಬೆಳೆಸಬೇಕಾದ ಕೆಲವು ಮಠಾಧೀಶರು, ಸಾಹಿತಿಗಳು ನಾಸ್ತಿಕ ಪ್ರವೃತ್ತಿ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ಅಪಾಯಕಾರಿ ಬೆಳವಣಿಗೆ’ ಎಂದರು.

‘ಪಂಚಪೀಠಗಳು ಯಾವುದೇ ಪಕ್ಷ ಮತ್ತು ವ್ಯಕ್ತಿಯ ಪರವಾಗಿ ಇರದೇ ಸಮಷ್ಟಿ ಪ್ರಜ್ಞೆಯನ್ನು ಬೆಳೆಸುತ್ತಾ ಬಂದಿವೆ. ವೀರಶೈವ ಧರ್ಮದಿಂದ ಲಿಂಗಾಯತ ಸ್ವತಂತ್ರ ಧರ್ಮ ಮಾಡಲು ಹೊರಟಿರುವ ಹಿನ್ನೆಲೆಯಲ್ಲಿ ಸೈದ್ಧಾಂತಿಕ ಸಂಘರ್ಷಗಳು ನಡೆದಿರಬಹುದು. ಬಹು ಸಂಖ್ಯಾತರಾದ ವೀರಶೈವ ಲಿಂಗಾಯತ ಸಮುದಾಯವನ್ನು ಒಡೆದಾಳುವ ನೀತಿಗೆ ಕೆಲವರು ಪ್ರಯತ್ನಿಸುತ್ತಿರುವುದು ಖಂಡನೀಯ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry