ಭಾನುವಾರ, ಡಿಸೆಂಬರ್ 15, 2019
25 °C

ದಾಖಲೆ ಇಲ್ಲದ ₹5 ಲಕ್ಷ ಹಣ ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾಖಲೆ ಇಲ್ಲದ ₹5 ಲಕ್ಷ ಹಣ ಜಪ್ತಿ

ರಾಯಚೂರು: ತಾಲ್ಲೂಕಿನ ಸಿಂಗನೋಡಿ ಚೆಕ್ ಪೋಸ್ಟ್‌ನಲ್ಲಿ ವಾಹನಗಳನ್ಮು ತಪಾಸಣೆ ಮಾಡುತ್ತಿದ್ದ ಪೊಲೀಸರಿಗೆ, ಯಾವುದೇ ದಾಖಲೆ ಇಲ್ಲದ ರೂ.5 ಲಕ್ಷ ನಗದು ಕಾರೊಂದರಲ್ಲಿ ಪತ್ತೆಯಾಗಿದೆ.

ಆಂಧ್ರಪ್ರದೇಶದ ಕರ್ನೂಲಿನ ನಾಗರಾಜ ಅವರು ಕಾರು ಚಾಲನೆ ಮಾಡಿಕೊಂಡು ರಾಯಚೂರಿನತ್ತ ಬರುತ್ತಿದ್ದರು. ತಪಾಸಣೆ ವೇಳೆ ದೊರೆತಿರುವ ದಾಖಲೆ ಇಲ್ಲದ ನಗದು ಸಂಬಂಧ ಯಾಪಲದಿನ್ನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕಾಂಗ್ರೆಸ್‌ ಕರಪತ್ರಗಳು ವಶ

ಹುಬ್ಬಳ್ಳಿ: ಗದಗ ರಸ್ತೆಯ ಚೆಕ್ ಪೋಸ್ಟ್‌ನಲ್ಲಿ ಮಿನಿ ಲಾರಿ ತಪಾಸಣೆ ‌ನಡೆಸಿದ ಪೊಲೀಸರು ರೋಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಿ.ಎಸ್.ಪಾಟೀಲ ಅವರಿಗೆ ಸೇರಿದ 5 ಸಾವಿರ ಕರಪತ್ರಗಳನ್ನು ಭಾನುವಾರ ‌ಬೆಳಿಗ್ಗೆ ವಶಪಡಿಸಿಕೊಂಡಿದ್ದಾರೆ.

ಕರಪತ್ರಗಳಲ್ಲಿ ಮುದ್ರಕರ ಹೆಸರು ಮತ್ತು ಒಟ್ಟು ಪ್ರತಿಗಳ ಸಂಖ್ಯೆ ಬರೆಯಬೇಕು. ಆದರೆ, ವಶಕ್ಕೆ ‌ಪಡೆಯಲಾದ ಕರಪತ್ರಗಳಲ್ಲಿ ಈ ವಿವರಗಳು ಇಲ್ಲ‌‌. ಹೀಗಾಗಿ ಪ್ರಜಾಪ್ರತಿನಿಧಿ ಕಾಯ್ದೆ ಉಪ ವಿಧಿ 27ರಲ್ಲಿನ ಸೂಚನೆಯನ್ನು ಉಲ್ಲಂಘಿಸಿದ್ದಕ್ಕಾಗಿ ಕರಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ‌.

ಸೆಕ್ಟರ್ ಅಧಿಕಾರಿ ನೀಡಿದ ದೂರಿನ ಅನ್ವಯ ಕೇಶ್ವಾಪುರ ಠಾಣೆಯಲ್ಲಿ ‌ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)