ಸೋಮವಾರ, ಜುಲೈ 13, 2020
24 °C

ಹತ್ಯೆಯಾದ 39 ಭಾರತೀಯರ ಮೃತದೇಹಗಳನ್ನು ತರಲು ಇರಾಕ್‌ಗೆ ತೆರಳಿದ ವಿ.ಕೆ ಸಿಂಗ್‌ / VK Singh to leave for Iraq to bring back bodies of 39 Indians

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಹತ್ಯೆಯಾದ 39 ಭಾರತೀಯರ ಮೃತದೇಹಗಳನ್ನು ತರಲು ಇರಾಕ್‌ಗೆ ತೆರಳಿದ ವಿ.ಕೆ ಸಿಂಗ್‌ / VK Singh to leave for Iraq to bring back bodies of 39 Indians

ನವದೆಹಲಿ: ಇರಾಕ್‌ನಲ್ಲಿ ಹತ್ಯೆಯಾಗಿರುವ 39 ಭಾರತೀಯರ ಮೃತದೇಹಗಳನ್ನು ಭಾರತಕ್ಕೆ ತರುವ ಸಲುವಾಗಿ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ. ಸಿಂಗ್‌ ಅವರು ಇರಾಕ್‌ಗೆ ಭಾನುವಾರ ತೆರಳಿದ್ದಾರೆ.

Minister of State for External Affairs General V K Singh (retd) will leave for Mosul to bring back the mortal remains of the 39 Indians who were killed in the war-torn country.

ಸಚಿವರು ಮೃತದೇಹಗಳನ್ನು ಸೋಮವಾರ ದೇಶಕ್ಕೆ ತರುವ ನಿರೀಕ್ಷೆ ಇದ್ದು, ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

The minister is expected to bring back the bodies by late Monday, following which he will travel to Amritsar, Punjab and Patna to hand over the mortal remains to their respective families.

‘ನಾನು ಇರಾಕ್‌ಗೆ ತೆರಳುತ್ತಿದ್ದೇನೆ. ನಾಳೆ ಅಮೃತಸರಕ್ಕೆ ಮರಳಲಿದ್ದು, ಬಳಿಕ ಕೊಲ್ಕತ್ತ, ಪಟ್ನಾ ತೆರಳಲಿದ್ದೇನೆ. ಈ ಬಗ್ಗೆ ಮೃತರ ಕುಟುಂಬಗಳಿಗೂ ಮಾಹಿತಿ ನೀಡಲಾಗಿದೆ’ ಎಂದು ಸಿಂಗ್‌ ತಿಳಿಸಿದ್ದಾರೆ.

"I am leaving for Iraq, will be getting back mortal remains of the 39 Indians. Tomorrow I will return to Amritsar, and then will go to Kolkata and then Patna. The families of the victims have been informed about the same," Singh said.

ಮಾರ್ಚ್‌ 20 ರಂದು ಸಂಸತ್‌ನಲ್ಲಿ ರಾಜ್ಯಸಭೆ ಸದ್ಯಸ್ಯರನ್ನುದ್ದೇಶಿಸಿ ಮಾತನಾಡಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು, ‘ಇರಾಕ್‌ನ ಮೋಸುಲ್‌ ನಗರದಲ್ಲಿ 2014ರಲ್ಲಿ ಅಪಹರಣಕ್ಕೊಳಗಾಗಿದ್ದ 39 ಮಂದಿ ಭಾರತೀಯರು ಐಎಸ್‌ ಉಗ್ರರಿಂದ ಹತ್ಯೆಯಾಗಿದ್ದಾರೆ’ ಎಂದು ಹೇಳಿದ್ದರು.

On March 20, External Affairs Minister (EAM) Sushma Swaraj informed the Rajya Sabha members in the Parliament that the 39 Indian nationals, who went missing in Mosul in 2014, were killed by the terror outfit Islamic State (IS).

ಹತ್ಯೆಯಾಗಿರುವ 39 ಜನರಲ್ಲಿ ಹೆಚ್ಚಿನವರು ಪಂಜಾಬ್‌ನವರು ಎನ್ನಲಾಗಿದ್ದು, ಅಪಹರಣಕ್ಕೊಳಗಾದಾಗ ಮೋಸುಲ್‌ ಬಳಿ ಕಾರ್ಯ ನಿರ್ವಹಿಸುತ್ತಿದ್ದರು.

The 39 persons, most of whom hailed from Punjab, were working on projects near Mosul when they were kidnapped.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.