ಭಾನುವಾರ, ಡಿಸೆಂಬರ್ 15, 2019
25 °C

ಪ್ರಜಾವಾಣಿ ಕ್ವಿಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಜಾವಾಣಿ ಕ್ವಿಜ್

1. ಗುಲ್ವಾಡಿ ವೆಂಕಟರಾಯರು ಬರೆದ ಕಾದಂಬರಿ ಯಾವುದು?

ಅ) ವಾಗ್ದೇವಿ

ಆ) ಇಂದಿರಾಬಾಯಿ

ಇ) ಮಾಡಿದ್ದುಣ್ಣೋ ಮಹರಾಯ

ಈ) ಆನಂದಮಠ

2. ‘ಅಮೃತ ಬಜಾರ್ ಪತ್ರಿಕಾ’ ಯಾವ ಭಾಷೆಯ ಪತ್ರಿಕೆ?

ಅ) ಹಿಂದಿ ಆ) ಗುಜರಾತಿ

ಇ) ಬಂಗಾಳಿ ಈ) ಒರಿಯಾ

3. ‘ಡಯಾಟಂ’ ಯಾವ ಗುಂಪಿಗೆ ಸೇರಿದ ಸಸ್ಯ?

ಅ) ಬೂಜು ಆ) ಜರಿಗಿಡ

ಇ) ಸೀತಾಳೆ ಈ) ಶೈವಲ

4. ರಂಗಾಚಾರ್ಲು ಇವರಲ್ಲಿ ಯಾರ ಆಳ್ವಿಕೆಯಲ್ಲಿ ದಿವಾನರಾಗಿದ್ದರು?

ಅ) 10ನೇ ಚಾಮರಾಜರು

ಆ) ಮುಮ್ಮಡಿ ಕೃಷ್ಣರಾಜರು

ಇ) ನಾಲ್ವಡಿ ಕೃಷ್ಣರಾಜರು

ಈ) ಜಯಚಾಮರಾಜರು

5. ಕನ್ನಡ ಸಾಹಿತ್ಯ ಪರಿಷತ್ತಿನ ಈಗಿನ ಅಧ್ಯಕ್ಷರು ಯಾರು?

ಅ) ನಲ್ಲೂರು ಪ್ರಸಾದ್

ಆ) ಪುಂಡಲೀಕ ಹಾಲಂಬಿ

ಇ) ಮನು ಬಳಿಗಾರ್

ಈ) ಚಂದ್ರಶೇಖರ ಪಾಟೀಲ

6. ವೀರಶೈವ ಪಂಚಪೀಠಗಳಲ್ಲಿ ಇವುಗಳಲ್ಲಿ ಯಾವುದು ಸೇರಿಲ್ಲ?

ಅ) ಕಾಶಿ

ಆ) ಶ್ರೀಶೈಲ

ಇ) ಉಜ್ಜಯಿನಿ

ಈ) ಪುರಿ

7. ಆರ್ಕಟಿಕ್ ಸರೋವರದ ಮಂಜುಗಡ್ಡೆ ಪದರ ಕರಗಲು ಕಾರಣವೇನು?

ಅ) ತಾಪಮಾನದ ಹೆಚ್ಚಳ

ಆ) ಮಳೆಯ ಕೊರತೆ

ಇ) ಮಳೆಯ ಹೆಚ್ಚಳ

ಈ) ತಾಪಮಾನದ ಇಳಿಕೆ

8. ಟೆನಿಸ್ ಆಟಗಾರ ರೋಜರ್ ಫೆಡರರ್ ಯಾವ ದೇಶದವರು?

ಅ) ಜರ್ಮನಿ

ಆ) ಇಟಲಿ

ಇ) ಆಸ್ಟ್ರೇಲಿಯಾ

ಈ) ಸ್ವಿಟ್ಜರ್ಲೆಂಡ್‌

9. ‘ಕ್ಯೂರಿಯಾಸಿಟಿ’ ನೌಕೆಯು ಇತ್ತೀಚೆಗೆ ಮಂಗಳನಲ್ಲಿ ಎಷ್ಟು ದಿನಗಳನ್ನು ಪೂರೈಸಿತು?

ಅ) ಐನೂರು ದಿನಗಳು

ಆ) ಎರಡು ಸಾವಿರ ದಿನಗಳು

ಇ) ಒಂದು ಸಾವಿರ ದಿನಗಳು

ಈ) ಮೂರು ಸಾವಿರ ದಿನಗಳು

10. ‘ಪುಷ್ಪಕ ವಿಮಾನ’ ಚಲನಚಿತ್ರದ ನಿರ್ದೇಶಕರು ಯಾರು?

ಅ) ಕೆ.ವಿಶ್ವನಾಥ್

ಆ) ಮಣಿರತ್ನಂ

ಇ) ಸಿಂಗೀತಂ ಶ್ರೀನಿವಾಸ ರಾವ್

ಈ) ಬಾಪು

ಹಿಂದಿನ ಸಂಚಿಕೆಯ ಸರಿ ಉತ್ತರಗಳು

1. ಮಾಸ್ತಿ ವೆಂಕಟೇಶ ಅಯ್ಯಂಗಾರ್

2. ಪುರಂದರದಾಸರು

3. ಮಾರ್ಚ್ 15

4. ನಾಲ್ಕು

5. ಎಚ್.ಎಲ್. ನಾಗೇಗೌಡ

6. ಎ. ಸೂರ್ಯಪ್ರಕಾಶ್

7. ಜಾನ್ ಟೇಲರ್ ಅಂಡ್.ಕಂ

8. ಗೊರೂರು ರಾಮಸ್ವಾಮಿ ಅಯ್ಯಂಗಾರ್

9. ಶ್ರೀಗಂಧ

10. ಕಡೂರು

ಎಸ್‌. ಎಲ್‌. ಶ್ರೀನಿವಾಸಮೂರ್ತಿ

ಪ್ರತಿಕ್ರಿಯಿಸಿ (+)