ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರಾಳದ ಮಾತೇ?

Last Updated 1 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿ ತಮ್ಮ 42ನೇ ‘ಮನದ ಮಾತು’ ತಿಂಗಳ ಕಾರ್ಯಕ್ರಮದಲ್ಲಿ (ಪ್ರ.ವಾ., ಮಾರ್ಚ್ 26, ಪುಟ 7, ‘ಇದು ಅಂಬೇಡ್ಕರ್ ಭಾರತ’) ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್‌ ಬಗ್ಗೆ ಹಾಗೂ ಭಾರತದ ಬಡವರು ಮತ್ತು ಹಿಂದುಳಿದವರ ಬಗ್ಗೆ ಮಾತನಾಡಿ ‘ಇದು ಅವರಿಗೆ ಸೇರಿದ ಭಾರತ’ ಎಂದು ಕೊಂಡಾಡಿದ್ದಾರೆ.

ಭಾರತದಂಥ ಒಂದು ರಾಷ್ಟ್ರದ ಪ್ರಧಾನಿಯಾಗಿ ಮೋದಿ ಅವರ ಮಾತುಗಳು ಮೆಚ್ಚುವಂತಹುವೇ! ಆದರೆ ಈ ಮಾತುಗಳು ಅವರ ಅಂತರಾಳದಿಂದ ಬಂದಿರುವಂಥವೇ ಅಥವಾ ಮೇಲ್ನೋಟಕ್ಕೆ ಯಾರನ್ನೋ ಮೆಚ್ಚಿಸಲಿಕ್ಕಾಗಿಯೇ ಆಡಿದಂಥ ಮಾತುಗಳೇ ಎಂಬ ಸಂಶಯ ನನ್ನಂಥವರಲ್ಲಿ ಮನೆ ಮಾಡಿದೆ.

ಅವರ ಕ್ಯಾಬಿನೆಟ್ ಸಚಿವರು ಹಾಗೂ ಅವರ ಪಕ್ಷದ ಕೆಲವು ಮುಖಂಡರು ಪದೇ ಪದೇ ಸಂವಿಧಾನ ಬದಲಾವಣೆ ಬಗ್ಗೆ ಹಾಗೂ ದಲಿತರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ಕೊಡುತ್ತಿದ್ದರೂ ಮೋದಿ ಅವರು ಪ್ರತಿಕ್ರಿಯೆ ತೋರದೆ, ಮೌನಕ್ಕೆ ಶರಣಾಗಿರುವುದನ್ನು ನೋಡಿದರೆ ಈ ಸಂಶಯ ಮತ್ತಷ್ಟು ದಟ್ಟವಾಗುತ್ತದೆ.

ಜನರಲ್ಲಿ ಮೋದಿ ಬಗ್ಗೆ ಇರುವ ಈ ಸಂಶಯಕ್ಕೆ ತೆರೆ ಎಳೆಯಬಲ್ಲಂಥವರು ಯಾರು?

→ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮುತ್ತೂರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT