ಭಾನುವಾರ, ಡಿಸೆಂಬರ್ 15, 2019
25 °C
ಮುಖ್ಯಮಂತ್ರಿಯಿಂದ ಪರಿಹಾರ ಘೋಷಣೆ

ಕಾರು ಗುದ್ದಿ ಮೂರಂತಸ್ತಿನ ಕಟ್ಟಡ ಕುಸಿತ: 10 ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

ಕಾರು ಗುದ್ದಿ ಮೂರಂತಸ್ತಿನ ಕಟ್ಟಡ ಕುಸಿತ: 10 ಸಾವು

ಇಂದೋರ್‌ : ವೇಗವಾಗಿ ಬಂದ ಕಾರು ಗುದ್ದಿದ ಪರಿಣಾಮ ಇಲ್ಲಿಯ ಸಾರ್ವಟೆ ಪ್ರದೇಶದಲ್ಲಿನ ಮೂರು ಅಂತಸ್ತಿನ ಕಟ್ಟಡವೊಂದು ಕುಸಿದು 10 ಮಂದಿ ಸಾವನ್ನಪ್ಪಿದ್ದಾರೆ. ಶನಿವಾರ ರಾತ್ರಿ ಈ ದುರ್ಘಟನೆ ನಡೆದಿದೆ.

ಕಟ್ಟಡದಲ್ಲಿ ವಸತಿಗೃಹ ಮತ್ತು ಹೋಟೆಲ್ ಇದ್ದವು. ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಡಳಿತ ಆದೇಶಿಸಿದೆ.

‘ಹಳೆಯ ಕಟ್ಟಡವಾಗಿದ್ದರಿಂದ ಕಾರು ಗುದ್ದಿದ ತಕ್ಷಣ ಕಟ್ಟಡ ನೆಲಕ್ಕುರುಳಿದೆ. ಘಟನೆಯನ್ನು ನಾವು ಕಣ್ಣಾರೆ ಕಂಡಿದ್ದೇವೆ’ ಎಂದು ಕೆಲವು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಇದು ಸುಮಾರು 60ವರ್ಷಗಳಷ್ಟು ಹಳೆಯ ಕಟ್ಟಡ.

ಪ್ರತಿಕ್ರಿಯಿಸಿ (+)