ಶುಕ್ರವಾರ, ಡಿಸೆಂಬರ್ 6, 2019
26 °C

ತಂಡದೊಂದಿಗೆ ಪ್ರಯಾಣ ಮಾಡದಿರಲು ದಿವಿಜ್ ನಿರ್ಧಾರ

Published:
Updated:
ತಂಡದೊಂದಿಗೆ ಪ್ರಯಾಣ ಮಾಡದಿರಲು ದಿವಿಜ್ ನಿರ್ಧಾರ

ನವದೆಹಲಿ (ಪಿಟಿಐ): ಕಾಯ್ದಿಟ್ಟ ಆಟಗಾರನಾಗಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ದಿವಿಜ್ ಶರಣ್‌ ಡೇವಿಸ್ ಕಪ್‌ ತಂಡದೊಂದಿಗೆ ಪ್ರಯಾಣ ಮಾಡದಿರಲು ನಿರ್ಧರಿಸಿದ್ದಾರೆ. ಇದರಿಂದಾಗಿ ಅವರು ಎಐಟಿಎ ಆಯ್ಕೆ ಸಮಿತಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ದಿವಿಜ್ ಅವರ ಈ ನಿರ್ಧಾರದಿಂದಾಗಿ ಆಟಗಾರರಿಗೂ ಕಠಿಣ ನೀತಿಸಂಹಿತೆ ಇರಬೇಕು ಎಂಬ ವಾದಕ್ಕೆ ಪುಷ್ಠಿ ಸಿಕ್ಕಂತಾಗಿದೆ. ಏಪ್ರಿಲ್‌ 6 ಮತ್ತು 7ರಂದು ತಿಯಾಂಜಿನ್‌ನಲ್ಲಿ ಚೀನಾ ತಂಡದ ಎದುರು ಡೇವಿಸ್ ಕಪ್ ಟೆನಿಸ್‌ ಪಂದ್ಯ ಆಯೋಜನೆಗೊಂಡಿದೆ.

‘ತಂಡಕ್ಕೆ ನನ್ನ ಅಗತ್ಯ ಬಿದ್ದರೆ ಮಾತ್ರ ಪ್ರಯಾಣ ಮಾಡುತ್ತೇನೆ’ ಎಂದು ಅಖಿಲ ಭಾರತ ಟೇಬಲ್‌ ಟೆನಿಸ್ ಸಂಸ್ಥೆ (ಎಐಟಿಎ) ಗೆ ದಿವಿಜ್ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಶರಣ್‌ ಭಾರತದ ಎರಡನೇ ಅಗ್ರರ‍್ಯಾಂಕಿಂಗ್ ಡಬಲ್ಸ್ ಆಟಗಾರ ಎನಿಸಿದ್ದಾರೆ. 44ನೇ ರ‍್ಯಾಂಕಿಂಗ್‌ ಸ್ಥಾನದಲ್ಲಿ ಅವರು ಇದ್ದಾರೆ. ತಂಡದೊಂದಿಗೆ ಪ್ರಯಾಣ ಮಾಡಿರುವ ಹಿರಿಯ ಆಟಗಾರ ಲಿಯಾಂಡರ್‌ ಪೇಸ್‌ (45) ನಂತರದ ಸ್ಥಾನದಲ್ಲಿ ಇದ್ದಾರೆ. ರೋಹನ್ ಬೋಪಣ್ಣ (20) ಮೊದಲ ಸ್ಥಾನದಲ್ಲಿ ಇದ್ದಾರೆ.

ಪೇಸ್‌ ಅವರು ಶರಣ್‌ಗಿಂತ ಒಂದು ಸ್ಥಾನದಲ್ಲಿ ಹಿಂದಿದ್ದರೂ ಅವರ ಅನುಭವದ ಆಧಾರದ ಮೇಲೆ ಆಯ್ಕೆ ಸಮಿತಿ ಅವರನ್ನು ಆಯ್ಕೆ ಮಾಡಿತ್ತು. ಬೋಪಣ್ಣ ಹಾಗೂ ಪೇಸ್‌ ಗಾಯಗೊಂಡರೆ ಅಥವಾ ಬೇರೆ ಕಾರಣದಿಂದ ಸ್ಪರ್ಧಿಸಲು ಸಾಧ್ಯವಾಗದಿದ್ದರೆ ಮಾತ್ರ ಶರಣ್‌ಗೆ ಆಡುವ ಅವಕಾಶ ಸಿಗಲಿದೆ. ಇದನ್ನು ಮನಗಂಡಿದ್ದ ಶರಣ್‌ ಚೀನಾಕ್ಕೆ ಪ್ರಯಾಣ ಮಾಡದಿರಲು ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರತಿಕ್ರಿಯಿಸಿ (+)