ಮಂಗಳವಾರ, ಜುಲೈ 14, 2020
24 °C
ಕಾರ್ಮಿಕರ ಕ್ರಿಕೆಟ್‌ ಪಂದ್ಯಾವಳಿ ಮುಕ್ತಾಯ

ಮಾನವ ಸಂಪನ್ಮೂಲ ವಿಭಾಗಕ್ಕೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾನವ ಸಂಪನ್ಮೂಲ ವಿಭಾಗಕ್ಕೆ ಜಯ

ದಾಂಡೇಲಿ: ನಗರದ ವೆಸ್ಟ್‌ಕೋಸ್ಟ್ ಪೇಪರ್ ಮಿಲ್‌ನ ಕಾರ್ಮಿಕರಿಗೆ ಹಮ್ಮಿಕೊಂಡಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಾನವ ಸಂಪನ್ಮೂಲ ವಿಭಾಗ ಚಾಂಪಿಯನ್ ಆಗಿ ಹೊರಹೊಮ್ಮಿತು.ಫೈನಲ್‌ನಲ್ಲಿ ಎದುರಾದ ಮಾನವ ಸಂಪನ್ಮೂಲ ವಿಭಾಗ ಹಾಗೂ ಎಲೆಕ್ಟ್ರಕಲ್ ತಂಡ ಎದುರಾದವು. ಎಲೆಕ್ಟ್ರಿಕಲ್ ವಿಭಾಗ ಎಲ್ಲ ವಿಕೆಟ್ ಕಳೆದುಕೊಂಡು 57 ರನ್ ಗಳಿಸಿತು. ನಂತರ ಬ್ಯಾಟಿಂಗ್ ಮಾಡಿದ ಮಾನವ ಸಂಪನ್ಮೂಲ ವಿಭಾಗವು ವಿಕೆಟ್ ನಷ್ಟವಿಲ್ಲದೇ ಗುರಿ ತಲುಪಿತು.ರೂಪೇಶ ಪವಾರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ, ಉತ್ತಮ ಬ್ಯಾಟ್ಸ್‌ಮನ್‌ ಆಗಿ ಫಕೀರಪ್ಪ ಛಲವಾದಿ, ಉತ್ತಮ ಬೌಲರ್‌ ಆಗಿ ನಾರಾಯಣ ಜೊಡೆಣ್ಣವರ ಬಹುಮಾನ ಪಡೆದರು. ರೂಪೇಶ ಪವಾರ ಸರಣಿ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದರು.

ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷ ಎಸ್.ಎನ್. ಪಾಟೀಲ  ಮಾತನಾಡಿ, ‘ಕಾರ್ಮಿಕರಿಗಾಗಿಯೇ ಟೂರ್ನಿ ಆಯೋಜಿಸಿರುವುದು ನಿಜಕ್ಕೂ ಒಂದು ಮಾದರಿ ಕಾರ್ಯಕ್ರಮ’ ಎಂದರು.

ಕಾರ್ಮಿಕ ಸೇನೆಯ ಅಧ್ಯಕ್ಷ, ವಕೀಲ ಬಿ.ಡಿ.ಹಿರೇಮಠ, ಕಂ‍ಪೆನಿಯ ಹಿರಿಯ ಅಧಿಕಾರಿ ಬಿ.ಎಸ್.ರಾಟಿ, ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.