ಟಿ.ಎನ್‌.ಶೇಷನ್‌ ಪತ್ನಿ ನಿಧನ

7

ಟಿ.ಎನ್‌.ಶೇಷನ್‌ ಪತ್ನಿ ನಿಧನ

Published:
Updated:

ನವದೆಹಲಿ: ಕೇಂದ್ರ ಚುನಾವಣಾ ಆಯೋಗದ ಮಾಜಿ ಆಯುಕ್ತ ಟಿ.ಎನ್‌. ಶೇಷನ್‌ ಅವರ ಪತ್ನಿ ಜಯಲಕ್ಷ್ಮೀ ಶೇಷನ್‌ ಅವರು ಮಾರ್ಚ್‌ 31ರಂದು ನಿಧನರಾದರು.

ಆದರೆ, ಸಾಮಾಜಿಕ ಜಾಲತಾಣದಲ್ಲಿ ಶೇಷನ್‌ ಅವರೇ ಸತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಕೆಲವರು ಶೇಷನ್‌ ಭಾವಚಿತ್ರ ಹಾಕಿ ಶ್ರದ್ಧಾಂಜಲಿಯನ್ನೂ ಸಲ್ಲಿಸಿದ್ದರು.

ಇದೇ ಸಂದರ್ಭದಲ್ಲಿ ಕೆಲವರು,‘ದೇವರ ದಯೆಯಿಂದ ಶೇಷನ್‌ ಆರೋಗ್ಯವಾಗಿದ್ದಾರೆ’ ಎಂದು ಸ್ಪಷ್ಟಪಡಿಸಿದ್ದರು.

‘ಮಕ್ಕಳಲಿಲ್ಲದ ಶೇಷನ್‌ ದಂಪತಿ, ಚೆನ್ನೈನ ವೃದ್ಧಾಶ್ರಮದಲ್ಲಿ ನೆಲೆಸಿದ್ದಾರೆ’ ಎಂದು ಈ ವರ್ಷದ ಆರಂಭದಲ್ಲಿ ‘ದೈನಿಕ್‌ ಜಾಗರಣ್‌’ ವರದಿ ಮಾಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry