ಮಂಗಳವಾರ, ಡಿಸೆಂಬರ್ 10, 2019
24 °C
ದಿಟ್ಟ ಬ್ಯಾಟಿಂಗ್‌ ಮಾಡಿದ ಲಥಾಮ್‌, ಜೀತ್‌ ರಾವಲ್‌

ಕುತೂಹಲ ಘಟ್ಟದಲ್ಲಿ ಟೆಸ್ಟ್ ಪಂದ್ಯ

Published:
Updated:
ಕುತೂಹಲ ಘಟ್ಟದಲ್ಲಿ ಟೆಸ್ಟ್ ಪಂದ್ಯ

ಕ್ರೈಸ್ಟ್ ಚರ್ಚ್‌, ನ್ಯೂಜಿಲೆಂಡ್ (ಎಎಫ್‌ಪಿ): ಇಂಗ್ಲೆಂಡ್ ಮತ್ತು ಆತಿಥೇಯ ನ್ಯೂಜಿಲೆಂಡ್ ತಂಡಗಳ ನಡುವಿನ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯ ಕುತೂಹಲಕಾರಿ ಘಟ್ಟ ತಲುಪಿದೆ.

ನಾಲ್ಕನೇ ದಿನವಾದ ಸೋಮವಾರ 382 ರನ್‌ಗಳ ಜಯದ ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌ ವಿಕೆಟ್ ಕಳೆದುಕೊಳ್ಳದೆ 42 ರನ್ ಗಳಿಸಿದೆ. ತಂಡದ ಗೆಲುವಿಗೆ ಕೊನೆಯ ದಿನ 340 ರನ್‌ಗಳ ಅಗತ್ಯವಿದೆ.

ಭಾರಿ ಮೊತ್ತವನ್ನು ಬೆನ್ನತ್ತಿದ ಆತಿಥೇಯರಿಗೆ ಟಾಮ್‌ ಲಥಾಮ್ ಮತ್ತು ಜೀತ್ ರಾವಲ್‌ ಉತ್ತಮ ಆರಂಭ ಒದಗಿಸಿ ವಿಕೆಟ್ ಕಳೆದುಕೊಳ್ಳದೆ ತಂಡದ ಕೈ ಹಿಡಿದರು. ಇವರಿಬ್ಬರು ಕ್ರಮವಾಗಿ 25 ಮತ್ತು 17 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

ಬೆಳಕಿನ ಅಭಾವದಿಂದಾಗಿ ದಿನದಾಟವನ್ನು ನಿಗದಿಗಿಂತ ಒಂದು ತಾಸು ಮೊದಲೇ ಅಂತ್ಯಗೊಳಿಸಲಾಯಿತು. ಹೀಗಾಗಿ ಉಭಯ ತಂಡಗಳ ಆಸೆಗೆ ತಣ್ಣೀರೆರಚಿದಂತಾಯಿತು.

ಮೊದಲ ಇನಿಂಗ್ಸ್‌ನಲ್ಲಿ 29 ರನ್‌ಗಳ ಮುನ್ನಡೆ ಗಳಿಸಿದ್ದ ಇಂಗ್ಲೆಂಡ್‌ ಎರಡನೇ ಇನಿಂಗ್ಸ್‌ ಅನ್ನು ಸೋಮವಾರ 352 ರನ್‌ಗಳಿಗೆ ಡಕ್ಲೇರ್ ಮಾಡಿಕೊಂಡಿತು.

ಮೂರನೇ ದಿನ ಇಂಗ್ಲೆಂಡ್‌ ಮೂರು ವಿಕೆಟ್‌ಗಳಿಗೆ 202 ರನ್‌ ಗಳಿಸಿತ್ತು. ಕ್ರಮವಾಗಿ 30 ಮತ್ತು 19 ರನ್‌ಗ ಗಳಿಸಿದ್ದ ಜೋ ರೂಟ್ ಮತ್ತು ಡೇವಿಡ್ ಮಲಾನ್‌ ನಾಲ್ಕನೇ ವಿಕೆಟ್‌ಗೆ 97 ರನ್‌ ಸೇರಿಸಿದರು.

ಕಾಲಿನ್ ಡಿ ಗ್ರಾಂದೋಮ್‌ ಈ ಜೋಡಿಯನ್ನು ಮುರಿದ ನಂತರ ಯಾರೂ ಹೆಚ್ಚು ಮಿಂಚಲಿಲ್ಲ. ಜಾನಿ ಬೇಸ್ಟೊ 36 ರನ್‌ ಗಳಿಸಿದ್ದರಿಂದ ತಂಡ 350 ರನ್‌ಗಳ ಗಡಿ ದಾಟಿತು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌, ಮೊದಲ ಇನಿಂಗ್ಸ್‌: 307; ನ್ಯೂಜಿಲೆಂಡ್‌, ಮೊದಲ ಇನಿಂಗ್ಸ್‌: 278; ಇಂಗ್ಲೆಂಡ್‌, ಎರಡನೇ ಇನಿಂಗ್ಸ್‌ (ಭಾನುವಾರದ ಅಂತ್ಯಕ್ಕೆ 3ಕ್ಕೆ202): 106.4 ಓವರ್‌ಗಳಲ್ಲಿ 9ಕ್ಕೆ352 ಡಿಕ್ಲೇರ್‌ (ಜೋ ರೂಟ್‌ 54, ಡೇವಿಡ್ ಮಲಾನ್‌ 53, ಜಾನಿ ಬೇಸ್ಟೊ 36; ಟ್ರೆಂಟ್ ಬೋಲ್ಟ್‌ 89ಕ್ಕೆ2, ಕಾಲಿನ್ ಡಿ ಗ್ರಾಂದೋಮ್‌ 94ಕ್ಕೆ4, ನೀಲ್ ವಾಗ್ನರ್‌ 51ಕ್ಕೆ2); ನ್ಯೂಜಿಲೆಂಡ್‌, ಎರಡನೇ ಇನಿಂಗ್ಸ್‌: 23 ಓವರ್‌ಗಳಲ್ಲಿ 42 (ಟಾಮ್ ಲಥಾಮ್‌ ಬ್ಯಾಟಿಂಗ್‌ 25, ಜೀತ್ ರಾವಲ್‌ ಬ್ಯಾಟಿಂಗ್‌ 17).

ಪ್ರತಿಕ್ರಿಯಿಸಿ (+)