ದೇಶದಾದ್ಯಂತ ಇ–ವೇ ಬಿಲ್ ಜಾರಿ ಯಶಸ್ವಿ

7
ವ್ಯವಸ್ಥೆಯಲ್ಲಿ ಯಾವುದೇ ತಾಂತ್ರಿಕ ಸಮಸ್ಯೆಗಳಿಲ್ಲ: ಆಧಿಯಾ

ದೇಶದಾದ್ಯಂತ ಇ–ವೇ ಬಿಲ್ ಜಾರಿ ಯಶಸ್ವಿ

Published:
Updated:
ದೇಶದಾದ್ಯಂತ ಇ–ವೇ ಬಿಲ್ ಜಾರಿ ಯಶಸ್ವಿ

ನವದೆಹಲಿ: ‘ಜಿಎಸ್‌ಟಿಯಲ್ಲಿ ಇ–ವೇ ಬಿಲ್‌ ವ್ಯವಸ್ಥೆಯನ್ನು ಯಾವುದೇ ತಾಂತ್ರಿಕ ಸಮಸ್ಯೆಗಳಿಲ್ಲದೇ ಯಶಸ್ವಿಯಾಗಿ ಜಾರಿಗೊಳಿಸಿದ್ದೇವೆ’ ಎಂದು ಕೇಂದ್ರ ಹಣಕಾಸು ಕಾರ್ಯದರ್ಶಿ ಹಸ್ಮುಖ್‌ ಆಧಿಯಾ ತಿಳಿಸಿದ್ದಾರೆ.

ತೆರಿಗೆ ತಪ್ಪಿಸುವ ಪ್ರವೃತ್ತಿ ತಡೆಯಲು ಹಾಗೂ ವರಮಾನ ವೃದ್ಧಿಸುವ ಉದ್ದೇಶದಿಂದ ರಾಜ್ಯಗಳ ಮಧ್ಯೆ ಸರಕು ಸಾಗಣೆಗೆ ಇ–ವೇ ಬಿಲ್‌ ವ್ಯವಸ್ಥೆಯನ್ನು  ದೇಶದಾದ್ಯಂತ ಜಾರಿಗೊಳಿಸಲಾಗಿದೆ.

ಮೊದಲ ದಿನವೇ 2.59 ಲಕ್ಷ ಬಿಲ್‌ ಸೃಷ್ಟಿಯಾಗಿದೆ. ಎರಡನೇ ದಿನ 4 ಗಂಟೆಯವರೆಗೆ ಒಟ್ಟಾರೆ 2.89 ಲಕ್ಷ ಬಿಲ್‌ಗಳು ಸೃಷ್ಟಿಯಾಗಿವೆ ಎಂದು ಜಿಎಸ್‌ಟಿಎನ್‌ ಮಾಹಿತಿ ನೀಡಿದೆ.

ಫೆಬ್ರುವರಿಯಲ್ಲಿಯೇ ವ್ಯವಸ್ಥೆಯನ್ನು ಪರಿಚಯಿಸಲಾಗಿತ್ತು. ಆದರೆ ತಾಂತ್ರಿಕ ಸಮಸ್ಯೆಗಳು ಕಂಡುಬಂದಿದ್ದರಿಂದ ಜಾರಿಯನ್ನು ಕೊನೆ ಕ್ಷಣದಲ್ಲಿ ಮುಂದೂಡಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry